ಖಾಸಗಿ ಲ್ಯಾಬ್‍ ಎಡವಟ್ಟು: ಬೆಂಗಳೂರು ಜನತೆಗೆ ಹೊಸ ಆತಂಕ

ಬೆಂಗಳೂರು,ಜ.3- ಖಾಸಗಿ ಲ್ಯಾಬ್‍ನವರ ಎಡವಟ್ಟಿನಿಂದ ಇಡಿ ಬೆಂಗಳೂರು ಜನತೆ ಆತಂಕಕ್ಕೆ ಈಡಾಗುವಂತೆ ಮಾಡಿದೆ.  ಖಾಸಗಿ ಲ್ಯಾಬ್‍ನಲ್ಲಿ ಟೆಸ್ಟಿಂಗ್ ಮಾಡಿಸಿಕೊಂಡಿರುವ ವ್ಯಕ್ತಿಯೊಬ್ಬನಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕಿತ ವ್ಯಕ್ತಿಯ ವಿವರ ಪಡೆಯುವಲ್ಲಿ ಲ್ಯಾಬ್‍ನವರು ವಿಫಲರಾಗಿರುವುದರಿಂದ ಆತ ಎಲ್ಲಿದ್ದಾನೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಓಮಿಕ್ರಾನ್ ಸೋಂಕಿತ ವ್ಯಕ್ತಿ ನಗರದಲ್ಲಿ ಎಲ್ಲೆಲ್ಲಿ ಓಡಾಡಿದ್ದಾನೆ ಮತ್ಯಾರಿಗೆ ಸೋಂಕು ಹರಡಿದ್ದಾನೆ ಎಂಬ ಬಗ್ಗೆ ಮಾಹಿತಿ ತಿಳಿಯುತ್ತಿಲ್ಲ. ಕಳೆದ ಡಿ.28 ರಂದು ಖಾಸಗಿ ಲ್ಯಾಬ್‍ಗೆ ತೆರಳಿದ 22 ವರ್ಷದ ಯುವಕನಿಗೆ 29 ರಂದು […]