ಬಾಡಿಗೆ ತಾಯ್ತನದ ಮೂಲಕ ಅಪ್ಪ-ಅಮ್ಮನಾದ ಪಿಂಕಿ-ನಿಕ್

ನವದೆಹಲಿ, ಜ.21- ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಮತ್ತು ನಿಕ್ಸ್ ಜೋನ್ಸ್ ಜೋಡಿ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದಾರೆ. ಜನವರಿ 21ರಂದು ಪ್ರಿಯಾಂಕ ತಮ್ಮ ಇನ್ಸ್‍ಟಾಗ್ರಾಮ್‍ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು, ನಾವು ಈ ಸುದ್ದಿಯನ್ನು ಪ್ರಕಟಿಸಲು ಸಂತೋಷ ಪಡುತ್ತೇವೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದೇವೆ. ಈ ವಿಶೇಷ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಎಲ್ಲರಲ್ಲಿ ಗೌರವಯುತವಾಗಿ ಕೇಳಿಕೊಳ್ಳುತ್ತೇವೆ. ನಮ್ಮ ಕುಟುಂಬಕ್ಕೆ ಗಮನ ಕೇಂದ್ರಿಕರಿಸುತ್ತೇವೆ ಎಂದು ಪ್ರಿಯಾಂಕ ಪೋಸ್ಟ್ ಹಾಕಿದ್ದಾರೆ. […]