ಕಂಜಾವಾಲ ಅಪಘಾತದ ವೇಳೆ ಸ್ನೇಹಿತೆ ಸ್ಥಳದಿಂದ ಪರಾರಿ

ನವದೆಹಲಿ,ಜ.3- ಕಂಜಾವಾಲ ಅಪಘಾತ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಮೃತಪಟ್ಟ ಯುವತಿಯ ಜೊತೆಗೆ ಆರಂಭದಲ್ಲಿ ಇದ್ದ ಸ್ನೇಹಿತೆ ಅಪಘಾತ ನಡೆದ ತಕ್ಷಣ ಸಣ್ಣಪುಟ್ಟ ಗಾಯಗಳೊಂದಿಗೆ ಸ್ಥಳದಿಂದ ಪರಾರಿಯಾಗಿರುವುದು ಸ್ಪಷ್ಟವಾಗಿದೆ. ಅಪಘಾತಕ್ಕೆ ಒಳಗಾದ 20 ವರ್ಷದ ಯುವತಿಯ ದೇಹ ಕಾರಿನ ಕೆಳಗೆ ಸಿಲುಕಿದ್ದು, 12 ಕಿಲೋ ಮೀಟರ್ ದೂರ ಎಳೆದುಕೊಂಡು ಹೋಗಿರುವುದು ಪ್ರಕರಣದ ಭೀಕರತೆಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಕರಣದತ್ತ ಹೆಚ್ಚು ಗಮನ ಹರಿಸಿದ್ದಾರೆ. ಆದರೆ ದೆಹಲಿಯ ಪೊಲೀಸರು ಕಳಪೆ ತನಿಕೆ […]