ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ನ್ಯಾಯಾಲಯದ ಮುಂದೆ ಹಾಜರ್

ನವದೆಹಲಿ,ಡಿ.9-ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀದ್ ಪೂನಾವಾಲನನ್ನು ಇಂದು ವಿಡಿಯೋ ಕಾನರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಲಾಯಿತು. ಇಪ್ಪತ್ತೆಂಟು ವರ್ಷದ ಅಫ್ತಾಬ್ ತನ್ನೊಂದಿಗೆ ಸಹ ಜೀವನ ನಡೆಸುತ್ತಿದ್ದ ಶ್ರದ್ಧಾ ವಾಲ್ಕರ್‍ಳನ್ನು ತನ್ನ ಅಪಾರ್ಟ್‍ಮೆಂಟ್‍ನಲ್ಲಿ ಕತ್ತುಹಿಸುಕಿ ಕೊಲೆ ಮಾಡಿ ನಂತರ 35 ತುಂಡುಗಳನ್ನಾಗಿ ಕತ್ತರಿಸಿ ರಿಫ್ರಿಜರೇಟರ್‍ನಲ್ಲಿ ಇಟ್ಟಿದ್ದ. ನಂತರ ಹಂತ ಹಂತವಾಗಿ ಅದನ್ನು ಛತ್ರಾಪುರ್ ಪ್ರದೇಶದಲ್ಲಿ ಕೆಲವೊಂದು ಅಂಗಗಳನ್ನು ವಿಲೇವಾರಿ ಮಾಡಿದ್ದ. ತಡವಾಗಿ ಬೆಳಕಿಗೆ ಬಂದ ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ತನಿಖೆ ನಡೆಸಿದ ದೆಹಲಿ […]