ಕರ್ನಾಟಕದ ಅಭಿವೃದ್ಧಿಯಗೆ ಡಬಲ್ ಇಂಜಿನ್ ಸರ್ಕಾರ ಅನಿವಾರ್ಯ: PM ಮೋದಿ

ಶಿವಮೊಗ್ಗ,ಫೆ.27- ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ವಿಕಾಸದ ಅಭಿಯಾನವು ಇನ್ನಷ್ಟು ಮುಂದೆ ಸಾಗಬೇಕಾದರೆ ನಾವು ಜೊತೆಗೆ ಸಾಗಬೇಕಾಗಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ರಾಜ್ಯದ ಜನತೆಗೆ ಕರೆ ಕೊಟ್ಟರು. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೆ ಆಗುವ ಅನುಕೂಲಗಳ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ ಅವರು, ಕರ್ನಾಟಕದ ಅಭಿವೃದ್ಧಿಯ ಪಥ ಸಾಗಬೇಕಾದರೆ ಬಿಜೆಪಿ ಅನಿವಾರ್ಯ ಎಂಬುದನ್ನು ಸೂಚ್ಯವಾಗಿ ಹೇಳಿದರು. […]