ಗೃಹಜ್ಯೋತಿ ಭರವಸೆ ಈಡೇರಿಸಲು ಕಾಂಗ್ರೆಸ್ ಬದ್ಧ

ಬೆಂಗಳೂರು,ಜ.13- ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲು ನಮ್ಮ ಪಕ್ಷ ಬದ್ಧವಾಗಿದೆ. ಈಗಾಗಲೇ ಹಲವಾರು ಜನಪರ ಯೋಜನೆಗಳನ್ನು ನೀಡಿ ಯಶಸ್ವಿಯಾಗಿದ್ದು, ಅದೇ ರೀತಿ ಗೃಹಜ್ಯೋತಿ ಭರವಸೆಯನ್ನು ಈಡೇರಿಸಲಾಗುವುದು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಗೃಹಜ್ಯೋತಿಯನ್ನು ಅಸಾಧ್ಯದ ಭರವಸೆ ಎಂದು ಬಿಜೆಪಿ ಅಪಪ್ರಚಾರ ಮಾಡಲು ಶುರು ಮಾಡಿದೆ. ಅಸಾಧ್ಯ ಎಂದ ಹಲವು ಜನಪರ ಯೋಜನೆಗಳನ್ನು ಕಾಂಗ್ರೆಸ್ ಈಗಾಗಲೇ ನೀಡಿ ಯಶಸ್ವಿಯಾಗಿರುವುದು ಕಣ್ಣ ಮುಂದಿದೆ. ಜನಪರ ಕೆಲಸಗಳು ಬಿಜೆಪಿಗೆ ಅಸಾಧ್ಯವಿರಬಹುದು, ಕಾಂಗ್ರೆಸ್ಸಿಗಲ್ಲ ಎಂದು ತಿರುಗೇಟು ನೀಡಲಾಗಿದೆ. ಕಾಂಗ್ರೆಸ್ ಜನಪರ ಯೋಜನೆಗಳ […]