ಆಸ್ತಿ ನೋಂದಣಿ ಏರಿಕೆ : ಪುಟಿದೆದ್ದ ರಿಯಲ್ ಎಸ್ಟೇಟ್

ಬೆಂಗಳೂರು,ಡಿ.6- ಕೋವಿಡ್ ಲಾಕ್‍ಡೌನ್‍ದಿಂದ ಮಂಕಾಗಿದ್ದ ಆಸ್ತಿ ನೋಂದಣಿ ಇದೀಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಹಣ ದುಬ್ಬರ, ದುಬಾರಿ ಬಡ್ಡಿದರ, ಅನಿಶ್ಚಿತತೆಯ ಹೊರತಾಗಿಯೂ ಪ್ರಸಕ್ತ 2022-23 ಸಾಲಿನಲ್ಲಿ ರಾಜ್ಯಾದ್ಯಂತ ಆಸ್ತಿ ಪತ್ರಗಳ ನೋಂದಣಿ ಪ್ರಮಾಣ ಗಣನೀಯ ಏರುಗತಿಯಲ್ಲಿದೆ. ಕೋವಿಡ್ ಎಫೆಕ್ಟ್: ಕೋವಿಡ್ ದಿಂದಾಗಿ ಎರಡು ವರ್ಷ ಭೂ ವಹಿವಾಟು ಪಾತಾಳಕ್ಕೆ ಇಳಿದಿತ್ತು. ಭೂಮಿ ಖರೀದಿ-ಮಾರಾಟ ವಹಿವಾಟು ಸಂಪೂರ್ಣ ನೆಲಕಚ್ಚಿತ್ತು. ಇದರಿಂದ ರಾಜ್ಯಾದ್ಯಂತ ಆಸ್ತಿ ಪತ್ರಗಳ ನೋಂದಣಿ ಪ್ರಕ್ರಿಯೆಯಲ್ಲಿ ಬಹುತೇಕ ಕುಸಿತ ಕಂಡಿತ್ತು. ಉಪ ನೋಂದಣಿ ಕಚೇರಿ: 2020-21ರಲ್ಲಿ […]