ಶ್ರೀಗಂಧದ ಮರ ರಕ್ಷಣೆಗೆ ಭದ್ರತಾ ಸಿಬ್ಬಂದಿ ನೇಮಕ

ಬೆಂಗಳೂರು,ಜ.4- ರಾಜ್ಯದಲ್ಲಿನ ಶ್ರೀಗಂಧದ ಮರಗಳ ರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಈ ಮರಗಳ ಮೇಲೆ ಕಣ್ಗಾವಲಿಡಲು ಸಿಸಿಟಿವಿ ಅಳವಡಿಕೆ ಹಾಗೂ ಭದ್ರತಾ ಸಿಬ್ಬಂದಿಗಳ ನಿಯೋಜನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮರಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಕಳ್ಳರಿಂದ ಮರಗಳ ರಕ್ಷಿಸಲು ಹಲವು ಕ್ರಮಗಳ ಕೈಗೊಳ್ಳಲು ಸರ್ಕಾರ ಮುಂದಾಗಿದೆ. 100 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯುವ ಶ್ರೀಗಂಧದ ಮರಗಳಿಗೆ ರಕ್ಷಣೆ ಒದಗಿಸಲಾಗುತ್ತದೆ. ಈ ಪ್ರದೇಶ ಗಳು ಶೂನ್ಯ ಸಹಿಷ್ಣು ವಲಯಗಳಾಗಿ ಮಾರ್ಪಡಿಸಲಾಗುತ್ತದೆ. ವಿಶೇಷ ಭದ್ರತೆ, ಶ್ವಾನದಳ ಮತ್ತು ಸಿಸಿಟಿವಿಗಳೊಂದಿಗೆ 24 […]
ಬೀದಿನಾಯಿಗಳ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಹೊಸದಿಲ್ಲಿ, ನ.18 – ಬೀದಿನಾಯಿಗಳನ್ನು ಸಾಕುವುದು ಎಂದರೆ ಬೀದಿಗಿಳಿದು, ಹೋರಾಟ ಮಾಡಿ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುವುದು ಎಂದರ್ಥವಲ್ಲ ಎಂದು ಸವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಮಾರು 60ಕ್ಕೂ ಹೆಚ್ಚು ಬೀದಿನಾಯಿಗಳಿಗೆ ರಕ್ಷಣೆ ನೀಡುವಂತೆ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುವಾಗ ಇದೇ ವಿಷಯದ ಕುರಿತು ಮತ್ತೊಂದು ಪೀಠವು ವಿಷಯವನ್ನು ಪರಿಗಣಿಸುತ್ತಿದೆ ಎಂದು ವರದಿಯಾಗಿರುವುದರಿಂದ ಪ್ರಸ್ತುತ ರಿಟ್ […]
ಪ್ರಧಾನಿ ಮೋದಿ ರಕ್ಷಣಾ ಪಡೆಗೆ ಮುಧೋಳ ತಳಿ ನಾಯಿ ಸೇರ್ಪಡೆ
ಬೆಂಗಳೂರು,ಆ.21- ಪ್ರಧಾನಮಂತ್ರಿ ಸೇರಿದಂತೆ ಗಣ್ಯರಿಗೆ ಒದಗಿಸುವ ವಿಶೇಷ ರಕ್ಷಣಾ ಪಡೆ(ಎಸ್‍ಪಿಜಿ)ಗೆ ಕರ್ನಾಟಕದ ದೇಶಿ ತಳಿ ಮುಧೋಳ ನಾಯಿ ಸೇರ್ಪಡೆಯಾಗಲಿದೆ. ಮುಧೋಳ ಹೌಂಡ್ ತಳಿ ಈ ಮೊದಲು ಭಾರತೀಯ ಸೇನೆ, ಭಾರತೀಯ ವಾಯುಪಡೆ, ಕೇಂದ್ರ ಸಶಸ್ತ್ರ ಮೀಸಲು ಅರೆಸೇನಾ ಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ, ರಾಜ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಪಡೆಗಳಲ್ಲಿ ಮುಧೋಳ ತಳಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎಸ್‍ಪಿಜಿ ದೇಶದಲ್ಲಿ ವಿಶೇಷ ಎಂದು ಗುರುತಿಸಿಕೊಂಡಿದ್ದು, ಉತ್ಕøಷ್ಟ ಸೇವೆಗೆ ಹೆಸರಾಗಿದೆ. ಎಸ್‍ಪಿಜಿಯ ಅಧಿಕಾರಿಗಳು ಮುಧೋಳ ತಳಿಯ […]
ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತ, ಮತಾಂತರ ನಿಷೇಧ ಮಸೂದೆ ಮಂಡಿಸಲು ಸಿದ್ಧತೆ
ಬೆಂಗಳೂರು,ಆ.6- ವಿಧಾನಪರಿಷತ್‍ನಲ್ಲಿ ಆಡಳಿತಾರೂಢ ಬಿಜೆಪಿಗೆ ಪೂರ್ಣ ಬಹುಮತ ಲಭಿಸಿರುವ ಕಾರಣ ಮುಂಬರುವ ಅಧಿವೇಶನದಲ್ಲಿ ಕರ್ನಾಟಕ ಧಾರ್ಮಿಕ ಸ್ವತಂತ್ರ ಹಕ್ಕು ಸಂರಕ್ಷಣಾ( ಮತಾಂತರ ನಿಷೇಧ) ಮಸೂದೆಯನ್ನು ಮಂಡಿಸಲು ತೀರ್ಮಾನಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಮೇಲ್ಮನೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ವಿಧಾನಪರಿಷತ್‍ನ ಒಟ್ಟು 75 ಸದಸ್ಯ ಬಲದಲ್ಲಿ ಬಿಜೆಪಿಗೆ 40 ಸ್ಥಾನಗಳು ಇರುವುದರಿಂದ ಮುಂಬರುವ ಅಧಿವೇಶನದಲ್ಲಿ ಈ ಕಾಯ್ದೆಯನ್ನು ಮಂಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲು ತೀರ್ಮಾನಿಸಿದೆ. ಕಳೆದ […]