ರಸ್ತೆ ಗುಂಡಿ ಮುಚ್ಚಿದ ದಂಪತಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ಬೆಂಗಳೂರು, ನ.3- ಉದ್ಯಾನನಗರಿಯ ರಸ್ತೆಗಳ ಗುಂಡಿಯಿಂದ ಪ್ರತಿನಿತ್ಯ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಗುಂಡಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಮಲ್ಲೇಶ್ವರಂನ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದಂಪತಿ ಗುಂಡಿ ತಪ್ಪಿಸಲು ಹೋಗಿ ಸ್ವಲ್ಪದರಲ್ಲೇ ಬೀಳುವುದರಿಂದ ಪಾರಾಗಿದ್ದು , ತಾವೇ ಕಲ್ಲು-ಮಣ್ಣು ತಂದು ಗುಂಡಿ ಮುಚ್ಚಿದ್ದಾರೆ. ದಂಪತಿಯ ಈ ಕಾರ್ಯಕ್ಕೆಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ರಸ್ತೆ ಗುಂಡಿಯ ಅವ್ಯವಸ್ಥೆಯನ್ನು ಸರಿ ಮಾಡಿ ಎಂದು ನಾಗಮಣಿ ದಂಪತಿ ಪರಿಪರಿಯಾಗಿ ಪಾಲಿಕೆಗೆ ಮನವಿ ಮಾಡಿದ್ದಾರೆ. ಇದು […]