ಮಾದಕ ವ್ಯಸನದಿಂದ ದೂರವಿರುವಂತೆ ಕಾಂಗ್ರೆಸ್ ಸದಸ್ಯರಿಗೆ ಸೂಚನೆ

ನವದೆಹಲಿ,ಫೆ.25-ಕಾಂಗ್ರೆಸ್ ಸದಸ್ಯರು ಸಾರ್ವಜನಿಕವಾಗಿ ಪಕ್ಷವನ್ನು ಟೀಕಿಸಬಾರದು ಹಾಗೂ ಮಾದಕ ದ್ರವ್ಯಗಳಿಂದ ದೂರ ಇರಬೇಕು ಎಂದು ರಾಯ್‍ಪುರ್‍ದಲ್ಲಿ ನಡೆಯುತ್ತಿರುವ 85ನೇ ಸರ್ವ ಸದಸ್ಯರ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ರಾಯ್‍ಪುರದ ಮೂರು ದಿನಗಳ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ಈ ರೀತಿಯ ಹೊಸ ನಿಯಮಗಳನ್ನು ಸೇರ್ಪಡೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರು ಸ್ವಯಂಸೇವಕರಾಗಿ ಸಮುದಾಯದ ಸೇವೆ ಮಾಡಬೇಕು ಮತ್ತು ಅವರಿಗೆ ಯಾವುದೇ ಘೋರ ಅಪರಾಧ ಶಿಕ್ಷೆ ಅನುಭವಿಸಿರಬಾರದು ಎಂಬ ನಿಯಮವೂ ಜಾರಿಗೆ ಬಂದಿದೆ. ಭಾರತದ ಮೇಲೂ ಹಾರಾಟ ನಡೆಸಿದ್ದ ಚೀನಾ […]