ಸುಗಮ ಸಂಚಾರ ಜಾರಿ- ಅಪಘಾತ ತಡೆ ಸಭೆಯಲ್ಲಿ ಸಾರ್ವಜನಿಕರ ಸಲಹೆ ಆಲಿಕೆ

ಬೆಂಗಳೂರು, ಡಿ.10- ನಗರ ಸಂಚಾರ ಪೊಲೀಸ್ ವಿಭಾಗವು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಬಾಂಧವ್ಯಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾಗರಿಕ ಸಂಚಾರ ವೇದಿಕೆ ಸಭೆ ನಗರದ ಎಲ್ಲಾ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ ನಡೆಸಲಾಯಿತು. ನಗರದ ರಸ್ತೆಗಳಲ್ಲಿ ಸುಗಮ ಸಂಚಾರವನ್ನು ಜಾರಿಗೊಳಿಸಲು ಹಾಗೂ ಅಪಘಾತಗಳನ್ನು ಸಮರ್ಥವಾಗಿ ತಡೆಗಟ್ಟಲು ಸಾರ್ವಜನಿಕರ ಸಹಕಾರ ಪ್ರಮುಖ ಪಾತ್ರವನ್ನು ವಹಿಸಿದೆ. ಈ ನಾಗರಿಕ ಸಂಚಾರ ವೇದಿಕೆ ಸಭೆಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ನಿವಾರಿಸುವುದರ ಜೊತೆಗೆ ಸಂಚಾರವನ್ನು ಸುಗಮಗೊಳಿಸುವ ಹಾಗೂ ರಸ್ತೆ […]