ಸ್ವಾತಂತ್ರ್ಯ ಸಂಭ್ರಮದಲ್ಲಿ ಐಕ್ಯತೆ ಬದಲಾಗಿ ಅಪಸ್ವರಗಳದ್ದೇ ಸದ್ದು

ಬೆಂಗಳೂರು,ಆ.14- ಸ್ವಾತಂತ್ರ್ಯ ಸಂಭ್ರಮದ 75ನೇ ವರ್ಷದಲ್ಲಿ ಕಂಡುಬರಬೇಕಿದ್ದ ಐಕ್ಯತೆ, ಒಗ್ಗಟ್ಟಿನ ಬದಲಾಗಿ ಸೈದ್ದಾಂತಿಕ ಸಂಘರ್ಷಗಳು, ವ್ಯಕ್ತಿತ್ವ ದೋಷಗಳು ಹೆಚ್ಚಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ನಿನ್ನೆ ಶಿವಮೊಗ್ಗದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಖಾಸಗಿ ಮಾಲ್‍ವೊಂದಕ್ಕೆ ನುಗ್ಗಿ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಅಳವಡಿಸಲಾಗಿದ್ದ ಫೋಟೋಗಳ ಸಾಲಿನಲ್ಲಿ ಸಾರ್ವಕರ್ ಭಾವಚಿತ್ರ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಮಾಲ್‍ನವರು ಫೋಟೊ ತೆರವು ಮಾಡಿದರು. ಅದೇ ಮಾರ್ಗದಲ್ಲಿ ಪಂಜಿನ ಮೆರವಣಿಗೆ ಬಂದ ಬಿಜೆಪಿ ಕಾರ್ಯಕರ್ತರು ಮಾಲ್‍ಗೆ ನುಗ್ಗಿ ಪ್ರತಿಭಟಿಸಿ ಬೀಗ ಹಾಕಿಸಿದರು. ಮಾಲ್‍ನವರು ಮತ್ತೆ ಸಾರ್ವಕರ್ […]