ಅಭಿಮಾನಿಗಳಿಗೆ ಗಿಡ ನೀಡುವ ಮೂಲಕ ಅಪ್ಪುಗೆ ನಮನ

ಬೆಂಗಳೂರು, ಜ.29- ಪುನೀತ್‍ರಾಜ್‍ಕುಮಾರ್ ಅವರ ಅಭಿಮಾನಿಗಳ ದಿನದಿಂದ ದಿನಕ್ಕೆ ಭಕ್ತರಾಗುತ್ತಿದ್ದು ಅಪ್ಪು ನಮ್ಮನ್ನಗಲಿದಾಗಿನಿಂದಲೂ ಪ್ರತಿದಿನವೂ ಸಮಾ ಬಳಿಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಿದ್ದು, ಅವರಿಗೆ ಗಿಡ ನೀಡುವ ಮೂಲಕ ನಮನ ಸಲ್ಲಿಸುತ್ತಿದ್ದೇವೆ ಎಂದು ನಟ ರಾಘವೇಂದ್ರರಾಜ್‍ಕುಮಾರ್ ಅವರು ಹೇಳಿದರು. ಮೂರನೆ ತಿಂಗಳ ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋ ಬಳಿ ಪುನೀತ್ ಪುಣ್ಯಭೂಮಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್, ಅಪ್ಪಾಜಿ ಅವರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರೂ ಯಾರಿಗಾದರೂ ಏನಾದರೂ ಹೇಳುವ ಮುನ್ನ ನಾವು […]