ಪುನೀತ್‍ ರಾಜ್‍ಕುಮಾರ್ ಕೊನೆಯ ಚಿತ್ರ ಜೇಮ್ಸ್ ಟೀಸರ್ ಬಿಡುಗಡೆ

ಬೆಂಗಳೂರು, ಫೆ.11- ಇಂದು ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅಭಿನಯದ ಕೊನೆ ಚಿತ್ರವಾದ ಜೇಮ್ಸ್ ಸಿನಿಮಾದ ಟೀಸರ್ ಅಪ್ಪು ಅಭಿಮಾನಿಗಳನ್ನು ಪುಳಕಗೊಳಿಸಿದೆ. ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಜೇಮ್ಸ್ ಸಿನಿಮಾದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಸೈನಿಕನ ಗೆಟಪ್‍ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ್ದರೆ,ಇಂದು ಜೇಮ್ಸ್ ಚಿತ್ರ ತಂಡವು ಪಿಆರ್‍ಕೆ ಆಡಿಯೋ ಕಂಪೆನಿಯಿಂದ 1 ನಿಮಿಷ 27 ಸೆಕಂಡ್‍ನ ಟೀಸರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಪವರ್ ಮೂಡಿಸಿದ್ದು, ಅಪ್ಪುವಿನ […]