ಪಲ್ಟನ್‍ನನ್ನು ಪಲ್ಟಿ ಹೊಡೆಸಲು ಸಿದ್ಧವಾದ ಬೆಂಗಳೂರುಬುಲ್ಸ್

ಬೆಂಗಳೂರು, ಜ.2- ಶ್ರೇಷ್ಠ ರೈಡರ್ಸ್, ಸಮರ್ಥ ಡಿಫರೆಂಡರ್ ಗಳನ್ನು ಒಳಗೊಂಡು ಬಲಿಷ್ಠ ತಂಡವಾಗಿರುವ ಬೆಂಗಳೂರು ಬುಲ್ಸ್ ತಂಡವು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದು ಇಂದು ಕೂಡ ಎದುರಾಳಿ ಪುನೇರಿ ಪಲ್ಟನ್ಸ್‍ನನ್ನು ನೆಲಕ್ಕೆ ಅಪ್ಪಳಿಸಿ ಅದರ ಜಂಘಾಬಲವನ್ನು ಕುಗ್ಗಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಜ್ಜಾಗಿದೆ. ಕಳೆದ ರಾತ್ರಿ ತೆಲುಗು ಟೈಟಾನ್ಸ್ ವಿರುದ್ಧ ಸೋಲಿನ ಅಂಚಿಗೆ ಬಂದಿದ್ದ ಬೆಂಗಳೂರು ಬುಲ್ಸ್ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ 34- 34 ರಿಂದ ಪಂದ್ಯವನ್ನು ಸಮಬಲಗೊಳಿಸಿರುವುದರಿಂದ ಇಂದಿನ ಪಂದ್ಯದಲ್ಲೂ ಆಟಗಾರರ ಹುಮ್ಮಸ್ಸು […]