ಪ್ರಧಾನಿ ಭದ್ರತಾ ಲೋಪ : ಕೇಂದ್ರಕ್ಕೆ ವರದಿ ಕೊಟ್ಟ ಪಂಜಾಬ್, ತನಿಖೆಗೆ ಸಮಿತಿ ರಚನೆ

ನವದೆಹಲಿ,ಜ.7- ಪ್ರಧಾನಿ ನರೇಂದ್ರಮೋದಿ ಅವರ ಸುರಕ್ಷತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ಬೆಳವಣಿಗೆಗಳಾಗಿದ್ದು, ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಯಾಗಿದೆ, ಪಂಜಾಬ್ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಸಮಗ್ರ ವರದಿ ನೀಡಿದೆ. ಜೊತೆಗೆ ಕೇಂದ್ರ ಸರ್ಕಾರವು ಮೂವರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದೆ. ಇದೆಲ್ಲದರ ಹೊರತಾಗಿ ದೇಶಾದ್ಯಂತ ಬಿಜೆಪಿ ಘಟಕಗಳು ಪ್ರಧಾನಿಯವರ ಕ್ಷೇಮಾಭಿವೃದ್ಧಿ ಮತ್ತು ಸುರಕ್ಷತೆಗಾಗಿ ಮಹಾಮೃತ್ಯುಂಜಯ ಜಪ ಸೇರಿದಂತೆ ಹಲವು ಹೋಮಹವನಾದಿಗಳನ್ನು ಹಮ್ಮಿಕೊಂಡಿವೆ. ಲಾಯರ್ ವಾಯ್ಸ್ ಎಂಬ ಸ್ವಯಂಸೇವಾ ಸಂಸ್ಥೆ ಯ ಮಹೇಂದ್ರ ಸಿಂಗ್ ಎಂಬುವರು, […]