ಪ್ರಧಾನಿ ಭೇಟಿ ವೇಳೆ ಭದ್ರತಾ ಲೋಪ : ಪಂಜಾಬ್ ಸರ್ಕಾರದಿಂದ ತನಿಖಾ ಸಮಿತಿ ರಚನೆ

ಚಂಡೀಗಢ, ಜ.6- ಪಂಜಾಬ್ ಸರ್ಕಾರವು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತಾ ಲೋಪಗಳಾಗಿವೆಯೇ ಎಂಬ ಬಗ್ಗೆ ತನಿಖೆ ನಡೆಸಲು ಇಂದು ಉನ್ನತಾಧಿಕಾರ ಸಮಿತಿಯನ್ನು ನೇಮಿಸಿದೆ ಎಂದು ಓರ್ವ ಅಧಿಕೃತವಕ್ತಾರ ತಿಳಿಸಿದ್ದಾರೆ. ಒಂದು ಬಾರಿ ಭದ್ರತಾ ಲೋಪವಾಗಿ ಪ್ರಧಾನಿಯವರ ಬೆಂಗಾವಲು ವಾಹನಗಳು ಫಿರೋಜ್‍ಪುರರದಲ್ಲಿ ನಡೆಸಿದ ರಸ್ತೆ ತಡೆಯಿಂದಾಗಿ ಫ್ಲೈ ಓವರ್ ಒಂದರ ಮೇಲೆಯೇ ಸಿಲುಕಿಕೊಳ್ಳುವಂತಾಗಿ ಬಳಿಕ ಮೋದಿ ಅವರು ಚುನಾವಣೆ ನಡೆಯಬೇಕಿರುವ ಪಂಜಾಬ್‍ನಲ್ಲಿನ ರ್ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ವಾಪಸಾಗಬೇಕಾಯಿತು. […]