ವಿಧಾನಸಭೆ ಚುನಾವಣೆ : ಪಂಜಾಬ್, ಉತ್ತರ ಪ್ರದೇಶದಲ್ಲಿ ಬಿರುಸಿನ ಮತದಾನ

ಚಂಡೀಗಢ,ಫೆ.20- ಪಂಜಾಬ್ ವಿಧಾನಸಭೆಯ 117 ಕ್ಷೇತ್ರಗಳಿಗೆ ಇಂದು ಬಿಗಿ ಭದ್ರತೆಯ ಮತದಾನ ನಡುವೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಕ್ರಮೇಣ ಬಿರುಸಾಯಿತು. 93 ಮಹಿಳೆಯರು ಮತ್ತು ಇಬ್ಬರು ತೃತೀಯ ಲಿಂಗಿಗಳೂ ಸೇರಿದಂತೆ ಒಟ್ಟು 1,304 ಅಭ್ಯರ್ಥಿಗಳು ಪ್ರತಿಷ್ಠಿತವೆನಿಸಿರುವ ಈ ಚುನಾವಣೆಯಲ್ಲಿ ಕಣದಲ್ಲಿದ್ದಾರೆ. 24,740 ಮತಗಟ್ಟೆಗಳಿದ್ದು, ಇವುಗಳಲ್ಲಿ 2,013 ಅನ್ನು ಅತಿ ಸೂಕ್ಷ್ಮ ಮತ್ತು 2,952 ಅನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,02,00,996 ಮಹಿಳೆಯರೂ ಸೇರಿದಂತೆ ಒಟ್ಟು 2,14,99,804 ಮತದಾರರು ಮತದಾನದ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. […]