ಉತ್ತರಪ್ರದೇಶ : ಬಸ್ ಹಾಗೂ ಡಬಲ್ ಡೆಕ್ಕರ್ ನಡುವೆ ಡಿಕ್ಕಿ, 8 ಮಂದಿ ಸಾವು..!

ಲಖ್ನೋ,ಜು.25- ಡಬಲರ್ ಡಕ್ಕರ್ ಖಾಸಗಿ ಬಸ್ ಮತ್ತೊಂದು ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ನಾರಾಯಣಪುರ ಗ್ರಾಮದ ಲೋನಿ ಕಾಟ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.50 ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಡಬಲಡಕ್ಕರ್ ಬಸ್ನಾರಾಯಣಪುರ ಗ್ರಾಮದ ಪೂರ್ವಾಂಚಲ ಎಕ್ಸ್ಪ್ರೆಸ್ ವೇ ಬಳಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲರನ್ನೂ ಹೈದರ್ಘರ್ ಸಮುದಾಯ ಆರೊಗ್ಯ ಕೇಂದ್ರದಲ್ಲಿ […]