ಪುಟ್ ಪಾತ್ ಮೇಲೆ ನುಗ್ಗಿದ ಕಾರು : ಸೆಕ್ಯುರಿಟಿಗಾರ್ಡ್ ಸಾವು

ಬೆಂಗಳೂರು,ಅ.11-ಅತಿವೇಗ, ಅಜಾಗರೂಕತೆ ಯಿಂದ ಕಾರು ಚಾಲನೆ ಮಾಡಿಕೊಂಡು ಪುಟ್ ಪಾತ್ ಮೇಲೆ ನುಗ್ಗಿ ಐದು ಮಂದಿಗೆ ಡಿಕ್ಕಿ ಹೊಡೆದ ಪರಿಣಾಮ ಸೆಕ್ಯುರಿಟಿ ಗಾರ್ಡ್ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದೆ. ತಿಂಡ್ಲುವಿನ ನಿವಾಸಿ ರವಿಶಂಕರ್ ರಾವ್(59) ಮೃತಪಟ್ಟ ಸೆಕ್ಯುರಿಟಿ ಗಾರ್ಡ್. ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾತ್ರಿ 11.45ರ ಸುಮಾರಿನಲ್ಲಿ ಕೊಡಿಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ದಮ್ ಬಿರಿಯಾನಿ […]