ಸರ್ಕಾರಿ ಉದ್ಯೋಗಕ್ಕಾಗಿ ಹೆಬ್ಬೆರಳ ಚರ್ಮವನ್ನೇ ತೆಗೆದು ಬೇರೆಯವರಿಗೆ ಅಂಟಿಸಿದ ಭೂಪ..!
ವಡೋದರ, ಆ.25- ಸರ್ಕಾರಿ ಉದ್ಯೋಗ ಪಡೆಯಲು ನಾನಾ ಕಸರತ್ತು ನಡೆಸುತ್ತಾರೆ. ಆದರೆ ಇಲ್ಲಿನ ಮಹಾಶಯನೊಬ್ಬ ತನ್ನ ಹೆಬ್ಬೆರಳಿನ ಚರ್ಮವನ್ನೇ ತೆಗೆದು ಮತ್ತೊಬ್ಬನಿಗೆ ನೀಡಿ ರೈಲ್ವೆ ಉದ್ಯೋಗ ಗಿಟ್ಟಿಸಲು ನಡೆಸಿದ ಅಕ್ರಮವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಹಂಬಲದೊಂದಿಗೆ ಹಲವು ಬಾರಿ ಪರೀಕ್ಷೆ ಬರೆದಿದ್ದ. ಆದರೆ ಉತ್ತೀರ್ಣನಾಗಿರಲಿಲ್ಲ. ತನ್ನ ಸ್ನೇಹಿತನ ಜಾಣ್ಮೆ ಹಾಗೂ ಪ್ರತಿಭಾನ್ವಿತೆಯನ್ನು ಅರಿತಿದ್ದ ಆತ ತನ್ನ ಹೆಬ್ಬೆರಳನ್ನು ಬಿಸಿ ನೀರಿನಲ್ಲಿ ಅದ್ದಿ ಚರ್ಮವನ್ನು ತೆಗೆದು ಆತನ ಹೆಬ್ಬೆರಳಿಗೆ ಅಂಟಿಸಿ ಪರೀಕ್ಷೆ ಬರೆಸಿದ್ದ ವಿಚಿತ್ರ […]