ಬಿಜೆಪಿ ಸಾಧನೆಯೇನು..? : ಡಿಕೆಶಿ ಪ್ರಶ್ನೆ

ಮೈಸೂರು, ಫೆ.16- ಬಿಜೆಪಿ ಪ್ರಣಾಳಿಕೆಯ ಶೇ.90 ರಷ್ಟನ್ನು ಈಡೇರಿಸಿಲ್ಲ. ಮೂರೂವರೆ ವರ್ಷದ ಅವಧಿಯಲ್ಲಿ ಅವರ ಸಾಧನೆ ಏನು ಎಂದು ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಸಿರು ಟವಲ್ ಹಾಕಿಕೊಂಡು ಬಜೆಟ್ ಮಂಡಿಸಿದ್ದರು. ಆದರೆ ಪ್ರಯೋಜನ ಏನೂ? ಬಿಜೆಪಿಯದ್ದು ಬರೀ ಸುಳ್ಳಿನ ಸರಮಾಲೆ.ಮೂರೂವರೆ ವರ್ಷದಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ. ಬಿಜೆಪಿಗೆ 170 ಪ್ರಶ್ನೆ ಕೇಳಿದ್ದೇವೆ. ಒಂದೇ ಒಂದು ಪ್ರಶ್ನೆಗೂ ಇದುವರೆಗೆ ಉತ್ತರ ಬಂದಿಲ್ಲ. ಸುಳ್ಳಿಗೂ ಒಂದು ಲೆಕ್ಕ ಇರಬೇಕು. ಆದರೆ ನಿಮಗೆ […]