ಸಿಎಂ ಆಗಲು ಹಣೆಬರಹ ಬೇಕು : ಆರ್.ಅಶೋಕ್

ಬೆಂಗಳೂರು,ಫೆ.13- ಮುಖ್ಯಮಂತ್ರಿಯಾಗಲು ಹಣೆಬರಹ ಇರಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಶಿವಾನಂದ ಎಸ್.ಪಾಟೀಲ್ ಅವರು ಹೊಸ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತ ಸೌಧ ಕಟ್ಟಡ ಕಟ್ಟಲು ಅವಕಾಶ ಮಾಡಿಕೊಡಿ. ನೀವು ಹಿರಿಯ ಸಚಿವರು. ಮುಂದೆ ಮುಖ್ಯಮಂತ್ರಿಯಾಗುವವರು. 50 ತಾಲ್ಲೂಕುಗಳಿಗೂ ಒಂದೊಂದು ಆಡಳಿತ ಸೌಧ ಮಂಜೂರು ಮಾಡಿ ನಮ್ಮ ಕಳಕಳಿಗೆ ಸ್ಪಂದಿಸಬೇಕು ಎಂದರು. ಆಗ ಪ್ರತಿಕ್ರಿಯಿಸಿದ ಅಶೋಕ್ ಮುಖ್ಯಮಂತ್ರಿಯಾಗಲು ಹಣೆಬರಹ ಇರಬೇಕು. ನಾವು ನೀವು ಮಾತನಾಡಿದರೆ ಆಗುವುದಿಲ್ಲ.ನಿಮ್ಮ ಪ್ರಸ್ತಾಪ ಆರ್ಥಿಕ ಇಲಾಖೆಗೆ ಸಂಬಂಧಿಸಿದೆ. […]