ದೇವರು ಬಲು ಕ್ರೂರಿ : ಧ್ರುವನಾರಯಣ್ ಅಗಲಿಕೆಗೆ ಡಿಕೆಶಿ ಕಂಬನಿ

ಬೆಂಗಳೂರು,ಮಾ.11- ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಯಣ್ ಅವರ ನಿಧನದಿಂದ ನಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ, ಇದು ನಮಗೆ ಅನಿರೀಕ್ಷಿತ ಆಘಾತ, ದೇವರು ಬಲು ಕ್ರೂರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಂಬನಿ ಶೋಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು. ದೇವರು ಇದ್ದಾನೋ ಇಲ್ಲವೋ ಅನ್ನುವಷ್ಟು ಅನುಮಾನವನ್ನು ಧ್ರುವನಾರಾಯಣ ಸಾವು ತಂದಿದೆ. ಧ್ರುವ ನಮ್ಮ ಕಾರ್ಯಾಧ್ಯಕ್ಷ ಎಂಬುದಕ್ಕಿಂತ ನಮ್ಮ ಕುಟುಂಬದ ಸದಸ್ಯ, ಸಹೋದರನಂತಿದ್ದರು. ನಮ್ಮ ಹೃದಯಕ್ಕೆ ಹತ್ತಿರವಾಗಿದ್ದರು. ಅವರ ಅಗಲಿಕೆ […]

ಒಂದೇ ಮತದಿಂದ ಗೆದ್ದು ಇತಿಹಾಸ ಬರೆದಿದ್ದ ಧ್ರುವನಾರಾಯಣ್

ಬೆಂಗಳೂರು,ಮಾ.11- ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಕೆ.ಧ್ರುವನಾರಾಯಣ್ ಅವರು 2004ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಮತದಿಂದ ಗೆದ್ದು ಇತಿಹಾಸ ಬರೆದಿದ್ದರು. ಭಾರತದ ಇತಿಹಾಸದಲ್ಲೇ ಗ್ರಾಮಪಂಚಾಯ್ತಿ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಒಂದೇ ಮತದಿಂದ ಗೆದ್ದು ಇತಿಹಾಸ ಬರೆದಿರುವ ದಾಖಲೆ ಅವರ ಹೆಸರಿನಲ್ಲೇ ಇದೆ. ಚಾಮರಾಜನಗರ ಜಿಲ್ಲೆ ಸಂತೆಮಾರನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆರ್.ಕೆ.ಧ್ರುವನಾರಾಯಣ, ಬಿಜೆಪಿ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಒಂದು ಮತದಿಂದ ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಕೆಪಿಸಿಸಿ […]