ರೇಸ್‍ ವೇಳೆ ಅಪಘಾತವಾಗಿ ಖ್ಯಾತ ರೇಸರ್ ಕುಮಾರ್ ದುರ್ಮರಣ

ಚೆನ್ನೈ,ಜ.9-ತಮಿಳುನಾಡಿನ ಮದ್ರಾಸ್ ಇಂಟರ್ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ನಡೆಯುತ್ತಿರುವ ಕಾರ್ ರೇಸ್‍ನಲ್ಲಿ ನಡೆದ ಅಪಘಾತದಲ್ಲಿ ಖ್ಯಾತ ಕಾರ್ ರೇಸರ್ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಮೃತಪಟ್ಟಿರುವ ಕಾರ್ ರೇಸರ್‍ನನ್ನು ಕೆ.ಇ.ಕುಮಾರ್ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಚೆನ್ನೈನ ಇರುಂಗಾಟುಕೊಟ್ಟೈನಲ್ಲಿರುವ ಮದ್ರಾಸ್ ಇಂಟರ್ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ನಡೆಯುತ್ತಿರುವ ಎಂಆರ್‍ಎಫ್ ಎಂಎಂಎಸ್‍ಸಿ ಎಫ್‍ಎಂಎಸ್‍ಸಿಐ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕುಮಾರ್ ಅವರ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಟ್ರಾಕ್‍ನಿಂದ ಹೊರಬಿದ್ದು ಉರುಳಿ ಬಿದ್ದ ಪರಿಣಾಂಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಎಲ್ಲಾ ಭಾಗಗಳು ಕಳಚಿ […]