ಶ್ರೀ ರಾಘವೇಂದ್ರ ಸ್ವಾಮಿಗಳ 351ಆರಾಧನಾ ಮಹೋತ್ಸವ

ಬೆಂಗಳೂರು, ಆ.11- ಜಯನಗರದ ಐದನೇ ಬಡಾವಣೆಯಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 351ನೇ ಶ್ರೀ ರಾಘವೇಂದ್ರ ಸ್ವಾಮಿಗಳ ಸಪ್ತ ರಾತ್ರೋತ್ಸವದ ಅಂಗವಾಗಿ ಇಂದಿನಿಂದ ಒಂದು ವಾರಗಳ ಕಾಲ ಆರಾಧನ ಕಾರ್ಯಕ್ರಮ ನೆರವೇರಲಿದೆ. ಇಂದು ಗೋಪೂಜೆ, ಧ್ವಜಾರೋಹಣ, ಧನ-ಧಾನ್ಯ ಹಾಗೂ ನೂತನವಾಗಿ ನಿರ್ಮಿಸಲಾದ ನವರತ್ನ ಕವಚದ ಪೂಜೆಯೊಂದಿಗೆ ಉದ್ಘಾಟನೆಯನ್ನು ಆರ್.ಕೆ. ವಾದಿಂದ್ರಾ ಆಚಾರ್ಯರು ಹಾಗೂ ಜಿ.ಕೆ.ಆಚಾರ್ಯರು ನೆರವೇರಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಮಠದ ವ್ಯವಸ್ಥಾಪಕ ಆರ್.ಕೆ. ವಾದಿಂದ್ರಾಚಾರ್ಯರು, ಭಕ್ತರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ. 12ರಿಂದ 14ರವರೆಗೂ […]