ಎನ್‍ಟಿಪಿಸಿ, ಲೆವೆಲ್1 ಪರೀಕ್ಷೆ ಅಮಾನತಿಗೆ ನಿರ್ಧಾರ

ನವದೆಹಲಿ,ಜ.26- ನೇಮಪಾತಿ ಪರೀಕ್ಷೆಗಳ ಆಯ್ಕೆ ಪ್ರಕ್ರಿಯೆ ಕುರಿತು ಉದ್ಯೋಗಾಂಕ್ಷಿಗಳ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ರೈಲ್ವೇಸ್ ತನ್ನ ನಾನ್‍ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರೀಸ್(ಎನ್‍ಟಿಪಿಸಿ) ಮತ್ತು ಲೆವೆಲ್ 1ರ ಪರೀಕ್ಷೆಗಳನ್ನು ಅಮಾನತು ಮಾಡಲು ನಿರ್ಧರಿಸಿದೆ ಎಂದು ರೈಲ್ವೆ ವಕ್ತಾರರೊಬ್ಬರು ತಿಳಿಸಿದ್ದಾರೆ. ವಿವಿಧ ರೈಲ್ವೆ ನೇಮಕಾತಿ ಮಂಡಳಿಗಳಡಿ ಪರೀಕ್ಷೆಗಳನ್ನು ತೇರ್ಗಡೆಯಾದ ಮತ್ತು ನಪಾಸಾದ ಅಭ್ಯರ್ಥಿಗಳ ಕುಂದುಕೊರತೆಗಳ ಪರಾಮರ್ಶೆಗಾಗಿ ರೈಲ್ವೇಸ್ ಒಂದು ಉನ್ನತಮಟ್ಟದ ಸಮಿತಿಯನ್ನು ರಚಿಸಿದೆ. ಉಭಯ ಬಣಗಳವರ ಅಹವಾಲುಗಳನ್ನು ಆಲಿಸಿದ ಬಳಿಕ ಸಮಿತಿಯು ರೈಲ್ವೆ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ವಕ್ತಾರ ಹೇಳಿದ್ದಾರೆ.