‘ರೈತ ಸಂಕ್ರಾಂತಿ’ ಹೆಸರಲ್ಲಿ ರೈತರೊಂದಿಗೆ ಜೆಡಿಎಸ್ ಅನ್ ಲೈನ್ ಸಂವಾದ

ಬೆಂಗಳೂರು, ಜ.15-ಕೃಷಿ ಸಮಸ್ಯೆಗಳ ಕುರಿತಂತೆ ರಾಜ್ಯದ ರೈತರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಲು ಜೆಡಿಎಸ್ ನಾಳೆ ರೈತ ಸಂಕ್ರಾಂತಿ ಎಂಬ ಅನ್ ಲೈನ್ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಾಳೆ ಸಂಜೆ 4ರಿಂದ 6 ಗಂಟೆವರೆಗೂ ರೈತರ ಜತೆ ಸಂವಾದ ನಡೆಸಲಿದ್ದು, ಸುಮಾರು 50ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳ ರೈತರ ಜತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಅನ್ ಲೈನ್ ವೇದಿಕೆ ಮೂಲಕ ನೇರ ಸಂವಾದ ನಡೆಸಲಾಗುತ್ತದೆ. ಬಿಡದಿ ಬಳಿಯ ಕುಮಾರಸ್ವಾಮಿ ಅವರ ತೋಟದಲ್ಲಿ ರೈತ ಸಂಕ್ರಾಂತಿ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. […]