ಆಸ್ಕರ್ ಗೆದ್ದಿರುವುದು ಖುಷಿ ತಂದಿದೆ : ರಾಜಮೌಳಿ

ನವದೆಹಲಿ, ಮಾ. 13- ಮಹೋನ್ನತ RRR ಸಿನಿಮಾದ ನಾಟು ನಾಟು ಗೀತೆಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸುತ್ತದೆ ಎಂದು ಮೊದಲಿನಿಂದಲೂ ನಿರೀಕ್ಷಿಸಿದ್ದೆವು, ಕೊನೆಗೂ ಹಾಲಿವುಡ್‍ನ ಗೀತೆಗಳಿಗೆ ಪ್ರಬಲ ಪೈಪೋಟಿ ನಡುವೆಯೂ ಆಸ್ಕರ್ ಪ್ರಶಸ್ತಿ ಬಂದಿರುವುದು ತುಂಬಾ ಸಂತಸ ತಂದಿದೆ ಎಂದು ನಿರ್ದೇಶಕ ರಾಜಮೌಳಿ ಸಂತಸ ಹಂಚಿಕೊಂಡಿದ್ದಾರೆ. ನಾಟು ನಾಟು ಗೀತೆಯ ಮೇಕಿಂಗ್ ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದು ಈ ಗೀತೆಗೆ ವಿಶ್ವದೆಲ್ಲೆಡೆ ಪ್ರಶಂಸೆಗಳ ಸುರಿಮಳೆಯೇ ಹರಿದುಬಂದಿತ್ತು. ಈಗಾಗಲೇ ಈ ಗೀತೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದ್ದು, ನಮಗೆ […]