ಜು.19ರಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ರಾಜಮುಡಿ ಉತ್ಸವ

ಮೇಲುಕೋಟೆ, ಜು.11- ಚೆಲುವನಾರಾಯಣಸ್ವಾಮಿಯ ಶ್ರೀಕೃಷ್ಣ ರಾಜಮುಡಿ ಉತ್ಸವ ಜುಲೈ 19ರಂದು ನಡೆಯಲಿದ್ದು, ಈ ಸಂಬಂಧದ ಧಾರ್ಮಿಕ ಕೈಂಕರ್ಯಗಳು ಜು.14ರ ಅಂಕುರಾರ್ಪಣೆಯೊಂದಿಗೆ ಆರಂಭವಾಗಲಿದೆ. ಮೈಸೂರು ದೊರೆ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಆಷಾಢಮಾಸದಲ್ಲಿ ಬ್ರಹ್ಮೋತ್ಸವ ಆರಂಭಿಸಿ ಉತ್ಸವದ ನಾಲ್ಕನೇ ದಿನವಾದ ಗರುಡೋತ್ಸವಕ್ಕೆ ವಜ್ರ ಖಚಿತ ಕೃಷ್ಣರಾಜಮುಡಿ ಕಿರೀಟ ಮತ್ತು ರಾಜಲಾಂಛನ ಗಂಡುಬೇರುಂಡ ಪದಕವನ್ನು ಕೊಡುಗೆಯಾಗಿ ನೀಡಿದ್ದರು. ಬ್ರಹ್ಮೋತ್ಸವದ ನೆನಪಿಗಾಗಿ ಕಲ್ಯಾಣಿ ಸಮುಚ್ಚಯದಲ್ಲಿ ಭುವನೇಶ್ವರಿ ಮಂಟಪವನ್ನೂ ನಿರ್ಮಿಸಿದ್ದಾರೆ. ಕೃಷ್ಣರಾಜಮುಡಿ ಉತ್ಸವದಂದು ರಾತ್ರಿ 7 ಗಂಟೆಗೆ ಶ್ರೀದೇವಿ ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ […]