ನದಿಗೆ ಕಾರು ಬಿದ್ದು ಮಧುಮಗ ಸೇರಿ 9 ಮಂದಿ ಸಾವು

ಕೋಟಾ(ರಾಜಸ್ಥಾನ),ಫೆ.20- ಮದುವೆ ದಿಬ್ಬಣವನ್ನು ಕರೆದೊಯ್ಯುತ್ತಿದ್ದ ಕಾರು ಇಲ್ಲಿನ ಚಂಬಲ್ ನದಿಗೆ ಬಿದ್ದ ಪರಿಣಾಮವಾಗಿ ಒಂಭತ್ತು ಜನರು ಮೃತಪಟ್ಟಿರುವ ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಮಧುಮಗನೂ ಸೇರಿದ್ದಾನೆ. ಈತ ತನ್ನ ಮದುವೆಗಾಗಿ ಇತರರೊಂದಿಗೆ ಮಾರುತಿ ಎರ್ಟಿಗಾ ಕಾರಿನಲ್ಲಿ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂದು ಬೆಳಗ್ಗೆ ನಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಾಲಕನು ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಕಾರಣ ಕಾರು ಸೇತುವೆಯಿಂದ ನದಿಗೆ ಬಿದ್ದು ದುರಂತ ಘಟಿಸಿದೆ […]