ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿದ ರಾಕೇಶ್ ಸಿಂಗ್
ಬೆಂಗಳೂರು,ಫೆ.20- ನಗರದಲ್ಲಿ ಪ್ರಗತಿಯಲ್ಲಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಖುದ್ದು ಪರಿಶೀಲನೆ ನಡೆಸಿದರು. ಚಂದ್ರಿಕಾ ಹೋಟೆಲ್ ನಿಂದ ಅಂಬೇಡ್ಕರ್ ಭವನ ಸಂಪರ್ಕಿಸುವ ರಸ್ತೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಅವರು, ಪ್ರಗತಿಯಲಿರುವ BWSSB ಪೈಪ್ ಲೈನ್ ಕಾಮಗಾರಿಗಳಿಗೆ ಹೆಚ್ಚುವರಿ ಕೆಲಸಗಾರರನ್ನು ನಿಯೋಜಿಸಿ ಹಗಲು ರಾತ್ರಿ ಕೆಲಸ ಮಾಡಿ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿದರು. ಬಸವೇಶ್ವರ ವೃತ್ತದ ಮೂಲಕ ಮಿನ್‍ಸ್ಕ್ವೇರ್ ಸಂಪರ್ಕಿಸುವ ರಾಜಭವನ ರಸ್ತೆ ಹಾಗೂ ಚಾಲುಕ್ಯ ವೃತ್ತದಿಂದ ಅಲಿ ಅಸ್ಕರ್, […]