ಬೆಂಗಳೂರಲ್ಲಿ ಮಾರಲೆತ್ನಿಸುತ್ತಿದ್ದ 399.6 ಕೆಜಿ ರಕ್ತ ಚಂದನ ವಶ

ಬೆಂಗಳೂರು, ಅ.29- ತಮಿಳುನಾಡಿನಿಂದ ರಕ್ತಚಂದನ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿ 399.6 ಕೆಜಿ ತೂಕದ ರಕ್ತ ಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅ.16ರಂದು ಸಂಜೆ ಸುಮಾರು 5.15ರಲ್ಲಿ ವಾಟಾಳ್ ನಾಗರಾಜ್ ರಸ್ತೆ ರೇಷ್ಮೆ ಭವನದ ಬಳಿಯ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಬ್ಯಾಗ್ ಹಿಡಿದುಕೊಂಡು ಅನುಮಾನಸ್ಪದವಾಗಿ ನಿಂತಿದ್ದನು. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‍ಐ ಆಂಜನೇಯ ಮತ್ತು ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ 11.6 ಕೆಜಿ ರಕ್ತಚಂದನ […]

5 ಮಂದಿ ಬಂಧನ, 1.4 ಟನ್ ರಕ್ತಚಂದನ ಜಪ್ತಿ

ಬೆಂಗಳೂರು,ಅ.13- ಅರಣ್ಯದಿಂದ ರಕ್ತಚಂದನ ಕಳ್ಳತನ ಮಾಡಿ ಸಾಗಿಸುತ್ತಿದ್ದ ಐದು ಮಂದಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 1.4 ಟನ್ ರಕ್ತಚಂದನ ಹಾಗೂ ಬೊಲೆರೊ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪೊಲೀಸರ ಕಣ್ತಪ್ಪಿಸಲು ರಕ್ತಚಂದನ ತುಂಡುಗಳನ್ನು ಗೋಣಿ ಚೀಲದಲ್ಲಿ ತುಂಬಿ ಅದರ ಮೇಲೆ ಟೊಮೊಟೊ ಬಾಕ್ಸ್ ಇಟ್ಟು ಬೊಲೆರೊ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು. ಮಂಡ್ಯದ ದೇವಲಾಪುರ ಅರಣ್ಯದಿಂದ ರಕ್ತಚಂದನ ಮರಗಳನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಸಾಗಿಸುವ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದು, ಬಂಧಿತರಿಂದ 1.4 ಟನ್ ರಕ್ತಚಂದನದ ತುಂಡುಗಳನ್ನು […]