ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ ಮೊಳಗಿದ ‘ಭಾರತ್ ಮಾತಾ ಕೀ ಜೈ’ ಘೋಷಣೆ

ವಾಷಿಂಗ್ಟನ್,ಮಾ.25-ವಿದೇಶಗಳಲ್ಲಿ ಖಲಿಸ್ತಾನಿ ಬೆಂಬಲಿಗರು ಭಾರತದ ವಿರುದ್ಧ ಘೋಷಣೆ ಕೂಗುತ್ತಿರುವುದು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತವಾಸ ಕಚೇರಿ ಮುಂಭಾದ ಭಾರತ್ ಮಾತಾ ಕೀ ಜೈ ಘೋಷಣೆ ಮೊಳಗುತ್ತಿದೆ. ದೂತವಾಸ ಕಚೇರಿ ಮುಂದೆ ಜಮಾಯಿಸಿರುವ ಸಾವಿರಾರು ಭಾರತೀಯರು ತಿರಂಗಾ ಧ್ವಜ ಹಿಡಿದು ಭಾರತ್ ಮಾತಾ ಕೀ ಜೈ ಘೋಷಣೆ ಮೊಳಗಿಸುವ ಮೂಲಕ ತಮ್ಮ ತಾಯ್ನಾಡಿನ ಬಗ್ಗೆಗಿನ ಪ್ರೀತಿಯನ್ನು ತೋರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಮೇಲೆ ಗುಂಪೊಂದು ದಾಳಿ ಮಾಡಿ ಕಟ್ಟಡದ ಹೊರ ಗೋಡೆಯ […]

ಛತ್ತೀಸ್‍ಗಢದಲ್ಲಿ ನಾಲ್ವರು ಅಮೃತ್‍ಸಿಂಗ್‍ಪಾಲ್ ಬೆಂಬಲಿಗರ ಸೆರೆ

ರಾಯ್‍ಪುರ,ಮಾ.24-ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರನ್ನು ಬೆಂಬಲಿಸಿ ನಗರದಲ್ಲಿ ರ್ಯಾಲಿ ನಡೆಸಿದ್ದಕ್ಕಾಗಿ ಛತ್ತೀಸ್‍ಗಢದ ರಾಯ್‍ಪುರದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳು, ದಿಲೇರ್ ಸಿಂಗ್ ರಾಂಧ್ವಾ (46), ಮಣಿಂದರ್ಜಿತ್ ಸಿಂಗ್ ಅಲಿಯಾಸ್ ಮಿಂಟು ಸಂಧು ಅಲಿಯಾಸ್ ಹರಿಂದರ್ ಸಿಂಗ್ ಖಾಲ್ಸಾ (44) ಮತ್ತು ಹರ್‍ಪ್ರೀತ್ ಸಿಂಗ್ ರಾಂಧವಾ ಅಲಿಯಾಸ್ ಚಿಂಟು (42) ಎಂದು ಗುರುತಿಸಲಾಗಿದೆ. ರ್ಯಾಲಿ ನಡೆಸಿರುವ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಯ್‍ಪುರ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಗೆ […]

ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ

ಬೆಂಗಳೂರು,ಜ.16- ಮಹಿಳೆಯರಿಂದ ಮಹಿಳೆಯರಿಗಾಗಿಯೇ ನಡೆದ ನಾ ನಾಯಕಿ ಸಮಾವೇಶದಲ್ಲಿ ನಾರಿಯರ ದರ್ಬಾರ್ ವಿಜೃಂಭಿಸಿತ್ತು. ಪ್ರತಿ ಸಮಾವೇಶದಲ್ಲೂ ಕಾಂಗ್ರೆಸ್ ನಾಯಕರೇ ತುಂಬಿ ಹೋಗಿರುತ್ತಾರೆ. ಅಲ್ಲಿ ಮಹಿಳಾ ನಾಯಕಿಯರ ಉಪಸ್ಥಿತಿ ನಗಣ್ಯವಾಗಿರುತ್ತಿತ್ತು. ಇಂದಿನ ನಾ ನಾಯಕಿ ಸಮಾವೇಶದ ವೇದಿಕೆಯಲ್ಲಿ 42 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಬಹುತೇಕ ಮಹಿಳಾ ನಾಯಕಿಯರೇ ತುಂಬಿ ಹೋಗಿದ್ದರು. ಶಾಸಕರು, ಸಂಸದರಿಗೆ ವೇದಿಕೆ ಮುಂಭಾಗದಲ್ಲಿ ಕುರ್ಚಿಗಳನ್ನು ಹಾಕಲಾಗಿತ್ತು. ವೇದಿಕೆಯ ಮೇಲೆ ಪ್ರಿಯಾಂಕ ಗಾಂಧಿಯವರ ಜೊತೆ ಮಹಿಳಾ ಕಾಂಗ್ರೆಸ್‍ನ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರು, ಮಹಿಳಾ […]

ಪ್ರೀಯಾಂಕ ಗಾಂಧಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ‘ಕೈ’ನಾಯಕರು

ಬೆಂಗಳೂರು,ಜ.16- ನಾ ನಾಯಕಿ ಸಮಾವೇಶಕ್ಕೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಅದ್ಧೂರಿಯಾಗಿ ಬರಮಾಡಿಕೊಂಡರು. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ‌.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಅನೇಕ ನಾಯಕರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಗಾಂಧಿ ಅವರನ್ನು ಸ್ವಾಗತಿಸಿದರು. ವಿ‌ಮಾನನಿಲ್ದಾಣದ ಹೊರಗೆ ಸಾದಹಳ್ಳಿ ಗೇಟ್ ಬಳಿ ಬೃಹತ್ ಸೇಬಿನ‌ ಹಾರ ಹಾಕಿ ಸ್ವಾಗತಿಸಲಾಯಿತು. ಅಲ್ಲಿಂದ ಕೆಲ ದೂರ ಮೆರಣಿಗೆಯಲ್ಲಿ ಪ್ರಿಯಾಂಕ ಆಗಮಿಸಿದರು. ಹಾದಿಯುದ್ಧಕ್ಕೂ ಕಾದು ನಿಂತಿದ್ದ ಅಭಿಮಾನಿಗಳಿಗೆ ಪ್ರಿಯಾಂಕ ಕೈ ಬಿಸಿ ಶುಭಾಷಯ […]

ಮೋದಿ ರ‍್ಯಾಲಿ ಮೇಲೆ ಡ್ರೋನ್ ಹಾರಾಟ : ಮೂವರ ಬಂಧನ

ಅಹಮದಾಬಾದ್,ನ.25- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದ್ದ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಮೋದಿ ರ‍್ಯಾಲಿ ನಡೆಸಿದ್ದ ಅಹಮದಾಬಾದ್ ಜಿಲ್ಲೆಯ ಬಾವ್ಲಾ ಗ್ರಾಮದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಬಾವ್ಲಾ ಗ್ರಾಮದಲ್ಲಿ ಯಾರು ಡ್ರೋಣ್ ಹಾರಾಟ ನಡೆಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧ ವಿದಿಸಿದ್ದರು ಕೆಲವರು ಡ್ರೋನ್ ಹಾರಾಟ […]

‘ಗಂಧದಗುಡಿ’ ಬೈಕ್ ರ‍್ಯಾಲಿ

ಬೆಂಗಳೂರು, ಅ.16- ಪ್ರಕೃತಿ ಮತ್ತು ಮನುಷ್ಯನ ನಡುವಿನ ಗಾಢ ಸಂಬಂಧವನ್ನು ನಟ ಪುನೀತ್ ರಾಜಕುಮಾರ್ ತಮ್ಮ ಜೀವಿತಾವಧಿಯಲ್ಲಿ ತೋರಿಸಿದ್ದು, ನಮಗೆ ಮಾದರಿಯಾಗಿ ಹೋಗಿದ್ದಾರೆ ಎಂದು ಉನ್ನತ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ನೆನಪಿಸಿಕೊಂಡಿದ್ದಾರೆ. ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ಗಂಧದ ಗುಡಿ ಬೈಕ್ ರ್ಯಾಲಿ ಉದ್ಘಾಟನೆ ಮತ್ತು ಸಸಿ ನೆಡುವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅರಣ್ಯ ಭವನದಿಂದ ಕಾವೇರಿ ಚಿತ್ರಮಂದಿರದವರೆಗೆ ಸಚಿವರು ಸ್ವತಃ ಬೈಕ್ ಚಾಲನೆ ಮಾಡಿ ರ್ಯಾಲಿಗೆ ಚಾಲನೆ ನೀಡಿದರು. ಗಂಧದ ಗುಡಿ ಸಿನಿಮಾದ ಟೀಸರ್ […]

ಗಡಿ ನಾಡು ಬಳ್ಳಾರಿಯಲ್ಲಿ ರಾಹುಲ್ ಅಬ್ಬರ

ಬಳ್ಳಾರಿ,ಅ.15- ಕಳೆದ 38 ದಿನಗಳಿಂದ ನಡೆಯುತ್ತಿರುವ ಅಖಿಲ ಭಾರತ ಐಕ್ಯತಾ ಯಾತ್ರೆ ಅಂಗವಾಗಿ ಇಂದು ಮೊದಲ ಬಾರಿಗೆ ಬಳ್ಳಾರಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆದಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಮೊದಲ ಬಾರಿಗೆ ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದಾರೆ. ಛತ್ತೀಸ್‍ಘಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ಯಾತ್ರೆಗೆ ಸಾಥ್ ನೀಡಿದ್ದಾರೆ. ಇಂದು ಬೆಳಗ್ಗೆ ಬಳ್ಳಾರಿಯ ಹಲಕುಂದಿ ಮಠದಿಂದ ಆರಂಭವಾದ ಪಾದಯಾತ್ರೆ ಕಮ್ಮ ಭವನದವರೆಗೂ 8.8 […]

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಮತ ಯಾತ್ರೆಗಳ ಪರ್ವ ಆರಂಭ

ಬೆಂಗಳೂರು,ಅ.11- ವಿಧಾನಸಭೆಯ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಂತೆ ಯಾತ್ರೆ ಮೇಲೆ ಯಾತ್ರೆ ಕೈಗೊಳ್ಳುತ್ತಿದ್ದು, ಜನಸಾಮಾನ್ಯರು ಬೇಸತ್ತು ಹೋಗುವಂತಾಗಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಪಾದಯಾತ್ರೆ ನಡೆಯುತ್ತಿದೆ. ಸೆ.30ಕ್ಕೆ ರಾಜ್ಯ ಪ್ರವೇಶಿಸಿದ ಈ ಯಾತ್ರೆ 500 ಕಿ.ಮೀಗೂ ಹೆಚ್ಚು ದೂರ ರಾಜ್ಯದಲ್ಲಿ 21 ದಿನಗಳ ಕಾಲ ಸಂಚರಿಸಲಿದೆ. ಬೆಂಗಳೂರು ಹೊರತುಪಡಿಸಿ ಬಹುತೇಕ ಸರಳರೇಖೆ ಮಾದರಿಯಲ್ಲಿ ಯಾತ್ರೆ ನಡೆಯುತ್ತಿರುವುದರಿಂದ ನಗರ ಪ್ರದೇಶಗಳ ದಟ್ಟಣೆಗೆ ಧಕ್ಕೆಯಾಗುತ್ತಿಲ್ಲ. ಇದರ ನಡುವೆ ರಾಹುಲ್ […]

ಜಮ್ಮು-ಕಾಶ್ಮೀರದಲ್ಲಿ ಗುಲಾಂನಬಿ ಅಜಾದ್ ರ‍್ಯಾಲಿ

ಜಮ್ಮು,ಸೆ.4- ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಗುಲಾಂನಬಿ ಅಜಾದ್ ಇಂದು ತವರು ನೆಲ ಜಮ್ಮುಕಾಶ್ಮೀರದಲ್ಲಿ ಪ್ರಥಮ ರ‍್ಯಾಲಿ ನಡೆಸುತ್ತಿದ್ದಾರೆ. ಇದೇ ದಿನ ತವರು ನೆಲದಲ್ಲಿ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ. ಜಮ್ಮುಕಾಶ್ಮೀರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಇಂದು ಬೆಳಗ್ಗೆ ದೆಹಲಿಯಿಂದ ಪ್ರಯಾಣ ಆರಂಭಿಸಿದರು. ಹಲವು ಕಾರ್ಯಕ್ರಮಗಳು, ಸಾರ್ವಜನಿಕ ಸಭೆಗಳು ನಿಗದಿಯಾಗಿದ್ದು, ಅದರಲ್ಲಿ ಗುಲಾಂನಬಿ ಅಜಾದ್ ಭಾಗವಹಿಸಲಿದ್ದಾರೆ.ಕಾಂಗ್ರೆಸ್ ಜೊತೆಗಿನ 5 ದಶಕಗಳ ಸಂಬಂಧವನ್ನು ಕಡಿದುಕೊಂಡಿರುವ ಅವರು ಆ.26ರಂದು ಪಕ್ಷದ ಎಲ್ಲ ಸ್ಥಾನಗಳಿಗೂ […]