ಶ್ರೀರಾಮದೇವರ ಬೆಟ್ಟ ಅಭಿವೃದ್ಧಿ ಪಡಿಸಲು ಮುಂದಾದ ಸರ್ಕಾರ

ಬೆಂಗಳೂರು,ಡಿ.14-ರಾಮನಗರ ಜಿಲ್ಲೆಯಲ್ಲಿರುವ ಪೌರಾಣಿಕ ಹಿನ್ನೆಲೆಯುಳ್ಳ ಶ್ರೀರಾಮದೇವರ ಬೆಟ್ಟವನ್ನು ಪವಿತ್ರ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಮದೇವರ ಬೆಟ್ಟದ ಮೇಲಿರುವ ಶ್ರೀರಾಮ ದೇವಾಲಯವನ್ನು ಜೀರ್ಣೋದ್ಧಾರ ಮಾಡುವುದರ ಜೊತೆಗೆ ರಾಮಜನ್ಮ ಭೂಮಿ ಅಯೋಧ್ಯೆ ಹಾಗೂ ಈ ಬೆಟ್ಟದ ನಡುವೆ ಅವಿನಾಭಾವ ಸಂಬಂಧ ಕಲ್ಪಿಸಲಾಗುತ್ತಿದೆ. ಆ ಮೂಲಕ ಅಗತ್ಯ ಮೂಲಸೌಲಭ್ಯ ಒದಗಿಸಿ ಪವಿತ್ರ ಯಾತ್ರಾ ಸ್ಥಳವಾಗಿ ರೂಪಿಸುವ ಉದ್ದೇಶ ಸರ್ಕಾರಕ್ಕಿದೆ. ರಾಮನಗರದಿಂದ ಬೆಳ್ಳಿ ಇಟ್ಟಿಗೆ, ಸ್ಥಳೀಯ ರೇಷ್ಮೆ ಸೀರೆ ಮತ್ತು ಶಲ್ಯವನ್ನು ಕಾಣಿಕೆಯಾಗಿ […]