ಹರಿಯಾಣ : ಬಸ್‍ಗೆ ಟ್ರಕ್ ಅಪ್ಪಳಿಸಿದ 7 ಮಂದಿ ಸಾವು

ಅಂಬಾಲಾ, ಮಾ.4-ಹರಿಯಾಣದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿ, ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಹರಿಯಾಣದ ಅಂಬಾಲಾದ ಯಮುನಾ ನಗರ-ಪಂಚಕುಲ ಹೆದ್ದಾರಿಯಲ್ಲಿ ಟ್ರೇಲರ್ ಟ್ರಕ್ ಹಿಂಬದಿಯಿಂದ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಶಹಜಾದ್‍ಪುರ ಪೊಲೀಸರು ತಿಳಿಸಿದ್ದಾರೆ. ಟ್ರಕ್ ಚಾಲಕ ನಿದ್ದೆ ಮಂಪರಿನಲ್ಲಿ ಚಲಿಸುತ್ತಿದ್ದ ಬಸ್‍ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು […]

ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು 12 ಮಂದಿ ಸಾವು

ಪಾಟ್ನಾ ನ.21-ದೇವರ ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮಕ್ಕಳು -ಮಹಿಳೆಯರು ಸೇರಿದಂತೆ 12 ಜನರು ಸಾವನ್ನಪ್ಪಿರುವ ಘಟನೆ ವೈಶಾಲಿಯಲ್ಲಿ ನಡೆದಿದೆ. ರಾಜ್ಯ ರಾಜಧಾನಿ ಪಾಟ್ನಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ವೈಶಾಲಿ ಜಿಲ್ಲೆಯಲ್ಲಿ ರಾತ್ರಿ ಈ ಘಟನೆ ನಡೆದಿದ್ದು,ಸುಮಾರು 40 ಜನರು ಗಾಯಗೊಂಡಿದ್ದಾರೆ ಎಂದು ವೈಶಾಲಿ ಪೊಲೀಸ್ ಅೀಧಿಕ್ಷಕ ಮನೀಶ್‍ ತಿಳಿಸಿದ್ದಾರೆ. ಆಕ್ರೋಷಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ 100ಕ್ಕೂ ಹೆಚ್ಚು ವಾಹನಗಳನ್ನು ದ್ವಂಸಗೊಳಿಸಿದರು ಟೈರ್‍ಗೆ ಬೆಂಕಿ ಹಚ್ಚಿದ […]

ತಿರುಪತಿಗೆ ತೆರಳುತ್ತಿದ್ದ ಕಾರು ಟ್ರಕ್‍ಗೆ ಡಿಕ್ಕಿ, ಸ್ಥಳದಲ್ಲೇ ಐವರು ಸಾವು

ಹೈದರಾಬಾದ್,ಆ.8- ತಿರುಪತಿಗೆ ತೆರಳುತ್ತಿದ್ದ ಕಾರು ನಿಂತ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟ ಘಟನೆ ಪ್ರಕಾಶಂ ಜಿಲ್ಲೆಯ ಮಾರ್ಚಾಲದ ಸಮೀಪ ಸಂಭವಿಸಿದೆ. ಮೃತರನ್ನು ಪಲ್ನಾಡು ಜಿಲ್ಲೆಯ ವೇಲ್ ದುರ್ತಿ ತಾಲ್ಲೂಕಿನ ಸಿರಿಗಿರಿ ಪಾಡು ನಿವಾಸಿಗಳಾದ ಅನಿಮಿ ರೆಡ್ಡಿ(60), ಗುರುವಮ್ಮ(60), ಅನಂತಮ್ಮ(55), ಆದಿಲಕ್ಷ್ಮಿ(58) ಮತ್ತು ನಾಗಿರೆಡ್ಡಿ(24) ಎಂದು ಗುರುತಿಸಲಾಗಿದೆ. ಅಪಘಾತದ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಸ್ಥಳೀಯರ ನೆರವಿನೊಂದಿಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಮೀಪ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ನಿಂತ ಟ್ರಕ್‍ಗೆ ಹಿಂಬದಿಯಿಂದ ಡಿಕ್ಕಿ […]