ಹಳಿ ತಪ್ಪಿದ ಗೂಡ್ಸ್ ರೈಲು

ನಾಗ್ಪುರ. ಅ,24- ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಹಳಿತಪ್ಪಿದ್ದು ಇದರಿಂದ ಈ ಭಾಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ. ಸುಮಾರು ಇಪ್ಪತ್ತು ವ್ಯಾಗನ್‍ಗಳು ಹಳಿಯಿಂದ ಉರುಳಿದ್ದು, ಇದರಿಂದಾಗಿ ಅನೇಕ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲಿನ ಮಾರ್ಗವನ್ನು ಬದಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ನಾಗ್ಪುರ ವಿಭಾಗದ ವಾರ್ಧಾ-ಬಡದೀರಾ ವಿಭಾಗದ ಮಲ್ಖೇಡ್ ಮತ್ತು ತಿಮಟ್ಲಾ ನಿಲ್ದಾಣಗಳ ನಡುವೆ ಕಳೆದ ರಾತ್ರಿ 11.20 ಕ್ಕೆ ಈ ಘಟನೆ ನಡೆದಿದ್ದು , ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ […]