ಇಂದು ಮಧ್ಯಾಹ್ನ ಸಿಇಟಿ ರ್‍ಯಾಂಕಿಂಗ್‌ ಪ್ರಕಟ

ಬೆಂಗಳೂರು,ಅ.1- ಇಂದು ಸಿಇಟಿ ಪರಿಷ್ಕøತ ರ್ಯಾಂಕಿಂಗ್ ಪಟ್ಟಿ ಪ್ರಕಟವಾಗಲಿದೆ. ನ್ಯಾಯಲಯದ ಆದೇಶದ ಮೇರೆಗೆ ಇಂದು ಸಿಇಟಿ ಪರಿಷ್ಕøತ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಲು ತೀರ್ಮಾನಿಸಲಾಗಿದೆ. ಇಂದು ಮಧ್ಯಾಹ್ನ ಸಿಇಟಿ ಪರಿಷ್ಕøತ ರ್ಯಾಂಕಿಂಗ್ ಫಲಿತಾಂಶ ಪ್ರಕಟವಾಗಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ಇಂದು ಮದ್ಯಾಹ್ನದ ನಂತರ karresults.nic.in 2022 ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.ಪರಿಷ್ಕøತ ರ್ಯಾಕಿಂಗ್ ಪಟ್ಟಿ ಆಧಾರದ ಮೇಲೆ ಅ.3 ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಸಿಇಟಿ ರ‍್ಯಾಂಕಿಂಗ್ ಹೈಕೋರ್ಟ್ ಆದೇಶ ಕುರಿತಾಗಿ ನಾಳೆ ಉನ್ನತ ಶಿಕ್ಷಣ ಇಲಾಖೆ ಸಭೆ

ಬೆಂಗಳೂರು,ಸೆ.4- 2020-21ನೇ ಸಾಲಿನ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ ಹೊಸ ಸಿಇಟಿ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸುವಂತೆ ಹೈಕೋರ್ಟ್ ನೀಡಿರುವ ಆದೇಶದ ಕುರಿತಾಗಿ ಮುಂದೆ ತೆಗೆದುಕೊಳ್ಳಬೇಕಾದ ಪ್ರಕ್ರಿಯೆಗಳ ಕುರಿತು ನಾಳೆ ಉನ್ನತ ಶಿಕ್ಷಣ ಇಲಾಖೆ ಮಹತ್ವದ ಸಭೆ ನಡೆಸಲಿದೆ. ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಆದೇಶವನ್ನು ಯಥಾವತ್ತಾಗಿ ಪಾಲನೆ ಮಾಡಬೇಕೆ ಇಲ್ಲವೆ ದಿಸದಸ್ಯ ಪೀಠಕ್ಕೆ ಮೆಲ್ಮನವಿ ಅರ್ಜಿ ಹಾಕಬೇಕೆ ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಅಡ್ವೋಕೇಟ್ ಜನರಲ್ ಮತ್ತು ಕಾನೂನು […]