ಅಯ್ಯಪ್ಪನ ದರ್ಶನ ಮಾಡಿ ವಾಪಸ್ಸಾಗುತ್ತಿದ್ದಾಗ ವಾಹನ ಅಪಾಘಾತ, 8 ಭಕ್ತರ ಸಾವು

ಇಡುಕ್ಕಿ,ಡಿ 24- ಪವಿತ್ರ ಶಬರಿಮಲೆ ಯಾತ್ರೆಯಿಂದ ವಾಪಸಾಗುತ್ತಿದ್ದ ವಾಹನ ಥೆಕ್ಕಡಿ-ಕಂಬಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿ ಎಂಟು ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ತಡ ರಾತ್ರಿ ವರದಿಯಾಗಿದೆ. ತಮಿಳುನಾಡಿನ ಥೇಣಿ ಜಿಲ್ಲೆಯ ಆಂಡಿಪಟ್ಟಿಯ 10 ಮಂದಿ ವ್ಯಾನ್‍ನಲ್ಲಿ ಶಬರಿಮಲೆ ಯಾತ್ರೆಗೆ ತೆರಳಿದ್ದರು. ದರ್ಶನ ಮುಗಿಸಿಕೊಂಡು ವಾಪಾಸ್ ಬರುವಾಗ ನಿನ್ನೆ ರಾತ್ರಿ 10.30ರ ಸುಮಾರಿನಲ್ಲಿ ದಟ್ಟ ಮಂಜು ಕವಿದಿತ್ತು. ತಮಿಳುನಾಡು -ಕೇರಳ ಗಡಿಯ ಕುಮ್ಲಿ-ಕ್ಯೂಂಬಮ್ ಗುಡ್ಡಗಾಡು ಮಾರ್ಗದಲ್ಲಿ ರಸ್ತೆ ಸರಿಯಾಗಿ ಗೋಚರಿಸಿಲ್ಲ. ವ್ಯಾನ್ ಚಾಲಕನ […]