ಕೆಲಸ ಕೊಡುವುದಾಗಿ ಕರೆಸಿಕೊಂಡು ಯುವತಿಯ ರೇಪ್

ನೆಲಮಂಗಲ,ಜ.22- ಉದ್ಯೋಗ ಕೊಡುವುದಾಗಿ ಹೇಳಿ ಯುವತಿಯನ್ನು ಕರೆಸಿ ಅತ್ಯಾಚಾರವೆಸಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಹರ್ಷಗೌಡ (26) ಎಂಬಾತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆರೇಳು ವರ್ಷಗಳಿಂದ ಹರ್ಷಗೌಡಗೆ ಒಂದೇ ಏರಿಯಾದಲ್ಲಿದ್ದ ಯುವತಿ ಪರಿಚಿತರಾಗಿದ್ದು, ಆತ್ಮೀಯರಾಗಿದ್ದರು ಎನ್ನಲಾಗಿದೆ. ಈ ನಡುವೆ ಜ.16ರಂದು ಕೆಲಸ ಕೊಡುವುದಾಗಿ ಹೇಳಿ ಹರ್ಷಗೌಡ ಯುವತಿಯನ್ನು ಕರೆಸಿಕೊಂಡಿದ್ದಾನೆ. ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿಕೊಂಡು ಕಾಯುತ್ತಿದ್ದಾಗ ಸ್ಕೂಟರ್‍ನಲ್ಲಿ ಯುವತಿ ಬಂದಿದ್ದು, ಒಂದು ಗಂಟೆಗೂ ಹೆಚ್ಚುಕಾಲ ಕಾರಿನಲ್ಲಿ ಕುಳಿತು ಇವರಿಬ್ಬರೂ ಮಾತನಾಡಿದ್ದಾರೆ. […]