ಜೆಡಿಎಸ್ ಪಂಚರತ್ನ ರಥಯಾತ್ರೆಗೆ ವ್ಯಾಪಕ ಜನಬೆಂಬಲ

ಬೆಂಗಳೂರು,ನ.30-ಮುಂಬರುವ ವಿಧಾನ ಚುನಾವಣೆಯಲ್ಲಿ ಬಹುಮತಗಳಿಸಿ ಸ್ವಂತ ಶಕ್ತಿಯ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಮಹದಾಸೆ ಹೊಂದಿರುವ ಜೆಡಿಎಸ್ ಆರಂಭಿಸಿರುವ ಮೊದಲ ಹಂತದ ಪಂಚರತ್ನ ರಥಯಾತ್ರೆಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ. ನ.18ರಂದು ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಪ್ರಾರಂಭವಾದ ಪಂಚರತ್ನ ರಥಯಾತ್ರೆಯು ಈಗಾಗಲೇ ಮೂರು ಜಿಲ್ಲೆಗಳ ಹದಿಮೂರು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ನಡೆಸಿದೆ. ಜನತಾ ಜಲಧಾರೆಯ ಮಾದರಿಯಲ್ಲೇ ಈ ಯಾತ್ರೆಗೂ ಪ್ರತಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಜನರು ಸೇರುತ್ತಿದ್ದಾರೆ. ಜತೆಗೆ ಕುಮಾರಸ್ವಾಮಿ ಅವರನ್ನು ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ, ಹಣ್ಣು, ತರಕಾರಿ, […]
3ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ

ಬೆಂಗಳೂರು, ನ.20-ಪಂಚರತ್ನ ರಥಯಾತ್ರೆಯ ಮೂರನೇ ದಿನವಾದ ಮಾಲೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಲಾಯಿತು. ಇಂದು ಬೆಳಿಗ್ಗೆ 10 ಗಂಟೆಗೆ ಮಾಲೂರಿನ ಕೆಂಪಸಂದ್ರದಿಂದ ಪ್ರಾರಂಭವಾದ ರಥಯಾತ್ರೆಯುಹುಣಸಿಕೋಟೆ , ಕೆ ಜಿ. ಹಳ್ಳಿ, ತೊರಲಕ್ಕಿ , ದಿನ್ನಹಳ್ಳಿ, ಮಾಸ್ತಿ, ಕುಡಿಯನೂರು,ಕೋಡಿಹಳ್ಳಿ ಗೇಟ್, ಸಂಪಂಗೆರೆ, ಚಿಕ್ಕತಿರುಪತಿ, ಲಕ್ಕೂರನಲ್ಲಿ ರಥಯಾತ್ರೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜರುಗಿದ ಈ ರಥಯಾತ್ರೆಗೆ ಭಾರೀ ಜನ ಬೆಂಬಲ ವ್ಯಕ್ತವಾಯಿತು. ಯಾತ್ರೆ ಸಾಗಿದ ಕಡೆಗಳಲ್ಲಿ ಜನರು ಸ್ವಾಗತ ಕೋರಿ ಕುಮಾರಸ್ವಾಮಿ ಅವರಿಗೆ ಸಮಸ್ಯೆಗಳ ಮನವಿ ಸಲ್ಲಿಸಿದರು. […]
ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಚಾಲನೆ

ಬೆಂಗಳೂರು,ಅ.27- ನಗರದ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನ.1 ರಂದು ಪ್ರಾರಂಭಿಸಲಿರುವ ಪಂಚರತ್ನ ರಥಯಾತ್ರೆಯ ಒಂದು ರಥಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮುಖಂಡರು ಪೂಜೆ ಸಲ್ಲಿಸಿದರು. ನವೆಂಬರ್ ಒಂದರಂದು ಕೋಲಾರ ಜಿಲ್ಲಾಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಕಳೆದ 1994ರಲ್ಲಿ ಹೆಚ್.ಡಿ.ದೇವೇಗೌಡರು ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರ ಆರಂಭ ಮಾಡಿದ್ದರು. ಆಗ ಅವರು ಬಹುಮತ ಗಳಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರು. ಈಗ ನಾವೂ ಅಲ್ಲಿಂದಲೇ […]