ವೋಟರ್ ಐಡಿ ಹಗರಣ: ರಾಜಕಾರಣಿಗಳ ಸಂಪರ್ಕದ ಬಗ್ಗೆ ಬಾಯಿ ಬಿಡದ `ಚಿಲುಮೆ’ ರವಿ

ಬೆಂಗಳೂರು,ನ.24- ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಪೊಲೀಸರು ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ರಾಜಕೀಯ ಒತ್ತಡದ ಕಾರಣಕ್ಕಾಗಿ ತಾವು ದತ್ತಾಂಶಗಳನ್ನು ಸಂಗ್ರಹಿಸಿದ್ದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಒತ್ತಡ ಹೇರಿದ ರಾಜಕಾರಣಿಗಳು ಯಾರು ಎಂಬ ವಿಷಯವನ್ನು ರವಿಕುಮಾರ್ ಬಾಯಿ ಬಿಡದೆ ಸತಾಯಿಸುತ್ತಿದ್ದಾರೆ. ತೀವ್ರ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ರವಿಕುಮಾರ್ ಹೇಳಿಕೆಗಳು ಮಹತ್ವದಾಗಿದೆ. ಹೀಗಾಗಿ ಸಮಗ್ರ ಮಾಹಿತಿ ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ ಬುದ್ದಿವಂತಿಕೆಯಿಂದ ವರ್ತಿಸುತ್ತಿರುವ ರವಿಕುಮಾರ್ ವಿಚಾರಣೆ ಸಂದರ್ಭದಲ್ಲಿ […]