ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ಕೋರಿದ RCB ಆಟಗಾರರು

ಬೆಂಗಳೂರು, ನ. 1- ಕರುನಾಡಿನೆಲ್ಲೆಡೆ ಇಂದು 67 ನೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕನ್ನಡದಲ್ಲೇ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ. ಆರ್ಸಿಬಿ ತಂಡದ ನಾಯಕ ರಾಗಿರುವ ದಕ್ಷಿಣ ಆಫ್ರಿಕಾದ ಪ್ಲಾಫ್ ಡು ಪ್ಲೆಸಿಸ್ , ಶ್ರೀಲಂಕಾದ ವಾನಿಂದು ಹಸರಂಗ ಅವರು ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ಕೋರಿರುವುದು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ಅದೇ ರೀತಿ ತಂಡದ ಪ್ರಮುಖ ಆಟಗಾರರಾದ ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್ ಮತ್ತಿತರರು […]