ಹರ್ಯಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆ

ಪಾಣಿಪಟ್,ಜ.6- ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಹೊರತಾಗಿಯೂ ರಾಹುಲ್‍ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಮುಂದುವರೆಯುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದಾರೆ. ಹೊಸ ವರ್ಷಾಚರಣೆಯ ವೇಳೆ 9 ದಿನಗಳ ಬಿಡುವಿನ ಬಳಿಕ ಜನವರಿ ಮೂರರಿಂದ ಎರಡನೇ ಹಂತ ಪಾದಯಾತ್ರೆ ಆರಂಭವಾಗಿದೆ. ದೆಹಲಿ, ಉತ್ತರ ಪ್ರದೇಶದಲ್ಲಿ ನಡೆದ ಯಾತ್ರೆ ನಿನ್ನೆ ಸಂಜೆ ಹರ್ಯಾಣ ರಾಜ್ಯ ಪ್ರವೇಶಿಸಿದೆ. ಈ ನಡುವೆ ರಾಹುಲ್‍ಗಾಂಧಿ ಅವರ ತಾಯಿ ಸೋನಿಯಾಗಾಂಧಿಯವರಿಗೆ ಸೋಂಕಿನಿಂದಾಗಿ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಬುಧವಾರ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. […]