ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್

ಬೆಂಗಳೂರು,ಡಿ.27- ಚೀನಾದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೆ ರಾಜ್ಯದಲ್ಲೂ ಕೊರೊನಾ ಸೋಂಕು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದು ರಾಜ್ಯದೆಲ್ಲೆಡೆ ಮಾಕ್ ಡ್ರಿಲ್ ನಡೆಸಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ರಾಜ್ಯದಲ್ಲಿರುವ ಜಿಲ್ಲೆ, ತಾಲೂಕು ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಕುರಿತ ಆರೋಗ್ಯ ಸೇವೆಗಳ ಮಾಕ್ ಡ್ರಿಲ್ ನಡೆಸಲಾಯಿತು. ನಗರದ ಸಿವಿರಾಮನ್ ಸಾರ್ವಜನಿಕ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಮತ್ತಿತರ ಆಸ್ಪತ್ರೆಗಳಲ್ಲೂ ಕೊರೊನಾ ಚಿಕಿತ್ಸೆ ಅಣಕು ಪ್ರದರ್ಶನಗಳು ನಡೆದವು. ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯ […]
ಇಂದು ದೇಶಾದ್ಯಂತ ಕೋವಿಡ್ ಮಾಕ್ ಡ್ರಿಲ್

ನವದೆಹಲಿ,ಡಿ.27- ಕೋವಿಡ್ ಸೋಂಕಿನಿಂದ ಎದುರಾಗಬಹುದಾದ ಸಂಭವನೀಯ ಸವಾಲುಗಳನ್ನು ನಿಭಾಯಿಸಲು ಆರೋಗ್ಯ ವ್ಯವಸ್ಥೆ ಸಜ್ಜುಗೊಂಡಿರುವುದನ್ನು ಪರೀಕ್ಷಿಸಲು ಇಂದು ದೇಶಾದ್ಯಂತ ಮಾಕ್ಡ್ರಿಲ್ ನಡೆದಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇಂದು ಸರ್ಕಾರಿ , ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸಂದರ್ಭಕ್ಕೆ ಪ್ರತಿಕ್ರಿಯಿಸಲು ಲಭ್ಯವಿರುವ ಸಂಪನ್ಮೂಲ ಮತ್ತು ಸೌಲಭ್ಯಗಳ ಕುರಿತು ಪರಿಶೀಲನೆ ನಡೆದಿರುವ ಜೊತೆಗೆ ಅಣುಕು ಪ್ರದರ್ಶನ(ಮಾಕ್ಡ್ರಿಲ್) ಕೂಡ ನಡೆಸಲಾಯಿತು. ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ ಸಾಮಥ್ರ್ಯ, ಮಾನವ ಸಂಪನ್ಮೂಲ, ತಜ್ಞ ವೈದ್ಯಕೀಯ ಸೇವೆ, ಪರೀಕ್ಷಾ ಸಾಮಥ್ರ್ಯ, ವೈದ್ಯಕೀಯ ಸಾಗಾಣಿಕಾ […]