ಏರ್‌ಬ್ಯಾಗ್‌ಗಳಲ್ಲಿ ದೋಷ : 17 ಸಾವಿರ ಕಾರುಗಳನ್ನು ವಾಪಸ್ ಪಡೆದ ಮಾರುತಿ

ನವದೆಹಲಿ,ಜ.18- ಮಾರುತಿ ಕಾರುಗಳ ಏರ್‌ಬ್ಯಾಗ್‌ಗಳಲ್ಲಿ ದೋಷ ಕಂಡುಬಂದಿರುವ ಹಿನ್ನಲೆಯಲ್ಲಿ ಮಾರುತಿ ಸುಜುಕಿ ಸಂಸ್ಥೆ ಗ್ರಾಹಕರಿಂದ 17,362 ವಾಹನಗಳನ್ನು ವಾಪಸ್ ಪಡೆದುಕೊಳ್ಳಲು ತೀರ್ಮಾನಿಸಿದೆ. ಆಲ್ಟೋ, ಬ್ರೆಜ್ಜಾ ಮತ್ತು ಬಲೇನೋ ಕಾರುಗಳ ಏರ್ ಬ್ಯಾಗ್‍ಗಳಲ್ಲಿ ದೋಷ ಕಂಡು ಬಂದಿರುವುದರಿಂದ ಏರ್ ಬ್ಯಾಗ್ ನಿಯಂತ್ರಕವನ್ನು ಸರಿಪಡಿಸುವ ಉದ್ದೇಶದಿಂದ ಇಂತಹ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕಳೆದ ಡಿಸಂಬರ್ 8ರಿಂದ ಜನವರಿ 12ರ ನಡುವೆ ತಯಾರಿಸಲಾಗಿರುವ ಅಲ್ಟೋ ಕೆ10, ಎಸ್‍ಪ್ರೆಸ್ಸೋ, ಇಕೋ, ಬ್ರೆಜ್ಜಾ, ಬಲೆನೋ, ಗ್ರಾಂಡ್ ವಿಟಾರಾ ಕಾರುಗಳ ಏರ್‌ಬ್ಯಾಗ್‌ಗಳಲ್ಲಿ ದೋಷ […]