ಅಪಪ್ರಚಾರಗಳಿಂದ ನೊಂದಿರುವೆ : ನೋವು ತೋಡಿಕೊಂಡ ರಶ್ಮಿಕ ಮಂದಣ್ಣ

ಬೆಂಗಳೂರು,ನ.9- ರಶ್ಮಿಕ ಮಂದಣ್ಣ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರಗಳಿಂದ ನೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾದ ಪೋಸ್ಟ್ ಪ್ರಕಟಿಸಿರುವ ಅವರು, ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇನೆ. ಆದರೆ ಸುಳ್ಳು ಮತ್ತು ಸೃಷ್ಟೀಕೃತ ನಕಲಿ ಮಾಹಿತಿಗಳು ತಮ್ಮನ್ನು ಘಾಸಿ ಮಾಡಿವೆ ಎಂದು ಹೇಳಿಕೊಂಡಿದ್ದಾರೆ. ಕೆಲವು ವಿಷಯಗಳು ನನಗೆ ತೊಂದರೆ ಕೊಡುತ್ತಿವೆ. ಸುಮಾರು ಒಂದು ವರ್ಷದಿಂದಲೂ ಈ ವಿಚಾರವಾಗಿ ಮಾತನಾಡಬೇಕು ಎಂದುಕೊಂಡಿದ್ದೆ. ನನ್ನ ಬಗ್ಗೆ ನಾನು ಮಾತ್ರ ಮಾತನಾಡಲು ಸಾಧ್ಯ. ಈ ಬಗ್ಗೆ ನಾನು ವರ್ಷದ ಮೊದಲೇ ಪ್ರತಿಕ್ರಿಯಿಸಬೇಕಿತ್ತು […]