ಅಂತರ್ ಜಾತಿ ವಿವಾಹವಾದವನ ಶವಕ್ಕೆ ಎರಡು ಬಾರಿ ಅಂತ್ಯಸಂಸ್ಕಾರ

ಗೌಹಾತಿ, ಆ.12- ಅಂತರ್ ಜಾತಿ ವಿವಾಹವಾದ ಕಾರಣಕ್ಕೆ 27 ವರ್ಷಗಳಿಂದ ಗ್ರಾಮಸ್ಥರ ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿಯ ಅಂತ್ಯ ಸಂಸ್ಕಾರ ಎರಡು ಬಾರಿ ನಡೆದ ಘಟನೆ ಅಸ್ಸಾಂನಲ್ಲಿ ನಡೆದಿದೆ. ದರ್ರಾಂಗ್ ಜಿಲ್ಲೆಯ ಪಟೋಲ್ಸಿಂಗ್ಪಾರಾ ಗ್ರಾಮದ ನಿವಾಸಿ ಅತುಲ್ ಶರ್ಮಾ (50) ಮಂಗಳವಾರ ನಿಧನರಾಗಿದ್ದರು. 27 ವರ್ಷಗಳ ಹಿಂದೆ ಆತ ಕೆಳ ಜಾತಿಯ ಹೆಣ್ಣನ್ನು ಮದುವೆಯಾದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದರು. ಸಾವನ್ನಪ್ಪಿದ ವೇಳೆ ಇಡೀ ಗ್ರಾಮಸ್ಥರು ಅಂತ್ಯ ಸಂಸ್ಕಾರದಿಂದ ದೂರ ಉಳಿದಿದ್ದಾರೆ. ನಾವ್ಯಾರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದಿಲ್ಲ, ನೀವೇ […]