ಡಿಜಿಟಲ್ ಮಾಧ್ಯಮಕ್ಕೆ ಬೀಳಲಿದೆ ಕಡಿವಾಣ

ಜೈಪುರ,ನ.24- ಡಿಜಿಟಲ್ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ನಿಯಂತ್ರಣ ಹಾಕಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಈ ಹಿಂದೆ ಸುದ್ದಿಗಳು ಏಕಮುಖವಾಗಿದ್ದವು, ಆದರೆ, ಇತ್ತಿಚೆಗೆ ಡಿಜಿಟಲ್ ಮಾಧ್ಯಮ ಬಿತ್ತರಿಸುವ ಸುದ್ದಿಗಳು ಬಹು ಆಯಾಮಗಳನ್ನು ಹೊಂದಿರುವುದರಿಂದ ಅವುಗಳ ನಿಯಂತ್ರಣಕ್ಕೆ ಶೀಘ್ರ ಮಸೂದೆ ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಡಿಜಿಟಲ್ ಮಾಧ್ಯಮವು ಅವಕಾಶಗಳನ್ನು ಮತ್ತು ಸವಾಲುಗಳನ್ನು ಹೊಂದಿವೆ. ಅವುಗಳ ಸಮತೋಲನಕ್ಕೆ ಏನು ಮಾಡಬಹುದು ಎಂಬ ಬಗ್ಗೆ ನಾವು ಚಿಂತಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. […]

ಡಿಜಿಟಲ್ ಮಾಧ್ಯಮಗಳಿಗೂ ಮಾನ್ಯತೆ, ಕೇಂದ್ರದ ಮಸೂದೆಯಲ್ಲಿ ಏನಿದೆ..?

ನವದೆಹಲಿ, ಜು.16- ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 155 ವರ್ಷಗಳಷ್ಟು ಹಳೆಯದಾದ ‘ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಬುಕ್ಸ್ ಆಕ್ಟ್’ ಅನ್ನು ಸರಳೀಕೃತ ಆವೃತ್ತಿಯೊಂದಿಗೆ ಬದಲಿಸಲು ಕೇಂದ್ರ ಆಸಕ್ತಿ ಹೊಂದಿದ್ದು, ವಿವಿಧ ನಿಬಂಧನೆಗಳನ್ನು ಅಪರಾಧವಲ್ಲ ಎಂದು ಘೋಷಿಸುವ ಮತ್ತು ಡಿಜಿಟಲ್ ಮಾಧ್ಯಮವನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವ ಮಸೂದೆಯನ್ನು ಪರಿಚಯಿಸಲಾಗುತ್ತಿದೆ. ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ- 2022 ಅನ್ನು […]