ಕಬ್ಬನ್ ಪಾರ್ಕ್‍ಗೆ ಯುವತಿಯನ್ನು ಕರೆಸಿಕೊಂಡು ರೇಪ್ ಮಾಡಿ ಆರೋಪಿ ಪರಾರಿ

ಬೆಂಗಳೂರು, ಆ.12- ಕಬ್ಬನ್ ಪಾರ್ಕ್‍ಗೆ ತನ್ನ ದೂರದ ಸಂಬಂಧಿ ಯುವತಿಯನ್ನು ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾಗಿರುವ ಆರೋಪಿಗಾಗಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ತಮಿಳು ನಾಡು ಮೂಲದ ರಮೇಶ್ ಪರಾರಿಯಾಗಿರುವ ಆರೋಪಿ. ಈತ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಕಳೆದ ಆ.6ರಂದು ಆರೋಪಿ ರಮೇಶ ಬೆಂಗಳೂರಿಗೆ ಬಂದು ಸಂತ್ರಸ್ತ ಯುವತಿಗೆ ಕರೆ ಮಾಡಿ ತನ್ನನ್ನು ಕಬ್ಬನ್ ಪಾರ್ಕ್‍ನಲ್ಲಿ ಭೇಟಿ ಮಾಡಬೇಕೆಂದು ತಿಳಿಸಿದ. ಆತನ ಮಾತನ್ನು ನಂಬಿ ಯುವತಿ ಕಬ್ಬನ್ […]